75 ವರ್ಷಗಳ ಹಿಂದೆ
ಪಾಟ್ನಾ, ಜುಲೈ 22– ಮಾಂಘೀರ್ ಜಿಲ್ಲೆಯ ಖಗಾರಿಯಾ ಸಬ್ ಡಿವಿಜನ್‌ಗೆ ಸೇರಿದ ರಾಮಗಂಜ್ ಮತ್ತು ಸಂಸಾರ್‌ಪೂರ್ ಎಂಬ ಹಳ್ಳಿಗಳ ಸುಮಾರು ಮೂರು ನೂರು ರೈತರು, ‘ಅನ್ನ ಕೊಡಿ’, ‘ಕೆಲಸ ಕೊಡಿ’ ಎಂದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮೂಲಕ ಸಬ್ ಡಿವಿಜನ್ ಕೋರ್ಟ್ ಮುಂದೆ ಪ್ರದರ್ಶನ ನಡೆಸಿದರೆಂದು ವರದಿಯಾಗಿದೆ.
ಮಾಂಘೀರ್ ಜಿಲ್ಲೆಯ ಕೆಲವು ಭಾಗದಲ್ಲಿ ಆಹಾರ ಅಭಾವದ ಉತ್ಕಾಟಾವಸ್ಥೆ ಹೆಚ್ಚಾಗಿದೆಯೆಂದು, ಅದಕ್ಕಾಗಿ ಈ ರೀತಿ ಪ್ರದರ್ಶನ ಮಾಡಲಾಯಿತು ಎಂದು ವರದಿಯಾಗಿದೆ.
ಎಸ್.ಡಿ.ಓ ಅವರು, ಭರವಸೆ ಇತ್ತ ಬಳಿಕ ಅಲ್ಲಿಂದ ಎಲ್ಲರೂ ಚದುರಿದರೆಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.