ADVERTISEMENT

25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:06 IST
Last Updated 29 ಜನವರಿ 2026, 0:06 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ

ಅಹ್ಮದಾಬಾದ್‌, ಜ. 28 (ಯುಎನ್‌ಐ)– ಗುಜರಾತಿನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂ
ಕಂಪದಿಂದ ಸತ್ತವರ ಸಂಖ್ಯೆ ಸತತವಾಗಿ ಏರುತ್ತಿದ್ದು, ಅದು 30,000 ತಲಪುವ
ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಒಂದು ಲಕ್ಷ ಮಂದಿ ಸಿಕ್ಕಿಹಾಕಿ
ಕೊಂಡಿರಬೇಕೆಂದು ಶಂಕಿಸಲಾಗಿದೆ.

ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿರುವಂತೆಯೇ ಇಂದು ಬೆಳಗ್ಗೆ ಕಛ್‌ನ ರಣ್‌, ಅಹ್ಮದಾಬಾದ್‌, ರಾಜ್‌ಕೋಟ್‌ ಮುಂತಾದ ಕಡೆ ಎರಡು ಭಾರಿ ಭೂಮಿ ಕಂಪಿಸಿತು. 

ಬೆಳಗ್ಗೆ ಆರು ಗಂಟೆ 45 ನಿಮಿಷಕ್ಕೆ ಸಂಭವಿಸಿದ ಮೊದಲ ಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.9ರಷ್ಟಿತ್ತು. ಅದರ ಬೆನ್ನಲ್ಲೇ 4.7ರಷ್ಟಿರುವ ಇನ್ನೊಂದು ಕಂಪನ ಸಂಭವಿಸಿತು.

ADVERTISEMENT

ಕಾರ್ಮಿಕರ ಮೇಲೆ ಲಾಠಿ ಪ್ರಹಾರ

ಕಲ್ಬುರ್ಗಿ, ಜ. 28– ಕಲ್ಲುತೂರಾಟದಲ್ಲಿ ತೊಡಗಿದ್ದ ಶಹಾಬಾದಿನ ಎಚ್‌ಎಂಪಿ ಸಿಮೆಂಟ್‌ ಕಾರ್ಖಾನೆಯ ಮುಷ್ಕರ ನಿರತ ಉದ್ರಿಕ್ತ ಕಾರ್ಮಿಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರಲ್ಲದೆ, ಕಲ್ಲುತೂರಾಟದಲ್ಲಿ ಒಟ್ಟು 9 ಮಂದಿ ಪೊಲೀಸರು ಗಾಯ
ಗೊಂಡ ಘಟನೆ ಶನಿವಾರ ಸಂಭವಿಸಿದೆ.

ಶನಿವಾರ ಕಾರ್ಖಾನೆಯ ಸುಮಾರು 150 ಮಂದಿ ಕಾರ್ಮಿಕರು ಕಾರ್ಖಾನೆಯಲ್ಲಿ ತಮಗೆ ಕೆಲಸ ಕೊಡುವ ಸಂಬಂಧ ಕಾರ್ಖಾನೆ ಗೇಟಿನ ಬಳಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.