
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಜ.29– ‘ಭಾರತೀಯ ಮಹಿಳಾ ಪ್ರಪಂಚಕ್ಕೆ ಪ್ರಸ್ತುತ ಕಾನೂನು ಕಟ್ಟಲೆಗಳು ಸರಿಸಮನಾದ ನ್ಯಾಯ ದೊರಕಿಸಿ ಕೊಡುತ್ತಿಲ್ಲ. ಆ ಕಾರಣ, ಸರ್ಕಾರ ಹಿಂದೂ ಕಾನೂನು ಮತ್ತು ಹಿಂದೂ ಕೋಡ್ ಮಸೂದೆಯನ್ನು ಪರಿಶೀಲನೆಗಾಗಿ ಒಂದು ಅಡ್‌ಹಾಕ್ ಸಮಿತಿಗೆ ಒಪ್ಪಿಸಿತು. ಆದರೆ, ಮಹಿಳೆ
ಯರ ಹಿತದೃಷ್ಟಿಯಿಂದ ನೋಡಿದರೆ ಹಿಂದೂ ಕೋಡ್ ಮಸೂದೆಯು ತೃಪ್ತಿಕರವಾಗಿಲ್ಲ. ಏಕೆಂದರೆ ಈ ಮಸೂದೆಯು ಎಲ್ಲಾ ದೃಷ್ಟಿಯಿಂದ ಮಹಿಳೆಯರಿಗೆ ಸರ್ವ ಸಮಾನತೆ ಬೇಕೆಂಬ ತತ್ವವನ್ನು ಎತ್ತಿ ಹಿಡಿಯುತ್ತಿಲ್ಲ’ ಎಂಬುವುದಾಗಿ ಅಖಿಲಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷಿಣಿಯಾದ ಶ್ರೀಮತಿ ಹನ್ನ್ಹಾ ಸೆನ್‌ರು ಅಧ್ಯಕ್ಷ ಭಾಷಣ ಮಾಡುತ್ತಾ ತಿಳಿಸಿದರು.
ಅಖಿಲ ಭಾರತ ಮಹಿಳಾ ಸಮ್ಮೇಳನದ 22ನೇ ಅಧಿವೇಶನ ಭಾನುವಾರ ಸಂಜೆ 4 ಗಂಟೆಗೆ ಸರ್. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸಮಾವೇಶಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.