ಬೆಂಗಳೂರು, ಜುಲೈ 12– ಶ್ರೀರಂಗಪಟ್ಟಣದ ಕಲ್ಲು ಗಣಿಯಲ್ಲಿ ಜೀತದಾಳುಗಳನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ ಘಟನೆ ಹಸಿಯಾಗಿರುವಾಗಲೇ ಮೈಸೂರು ಸಮೀಪದ ನೂಲು ಗಿರಣಿಯೊಂದರಲ್ಲಿ ಉತ್ತರ ಪ್ರದೇಶದ ಒಂಬತ್ತು ಮಂದಿ ಹದಿಹರೆಯದವರನ್ನು ಜೀತದಾಳುಗಳಾಗಿ ಇಟ್ಟುಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶಕ್ಕೆ ಸೇರಿದ ಯುವಕರು ನೂಲಿನ ಗಿರಣಿ ಮಾಲೀಕರ ಹಿಡಿತದಿಂದ ತಪ್ಪಿಸಿಕೊಂಡು ತಮ್ಮ ಊರಿಗೆ ಹೋಗುವ ಸಲುವಾಗಿ ಮೈಸೂರಿನಿಂದ ಬೆಂಗಳೂರಿನ ಬಸ್ ಹತ್ತುತ್ತಿರುವಾಗ ದಕ್ಷಿಣ ಭಾರತ ಮಾನವ ಹಕ್ಕು ಶಿಕ್ಷಣ ಹಾಗೂ ಸರ್ವೇಕ್ಷಣಾ (ಸಿಚೆರೆಮ್) ಕಾರ್ಯಕರ್ತ ಸೋನಿ ಎಂಬುವವರು ಪತ್ತೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.