
ಪ್ರಜಾವಾಣಿ ವಾರ್ತೆನವದೆಹಲಿ, ಡಿ. 9– ‘ವಿದ್ಯಾವಂತರಿಗೂ, ಸಾಮಾನ್ಯ ಜನತೆಗೂ ನಡುವೆ ಕೃತವಾಗಿ ಬೆಳೆದು ಬಂದ ಗೋಡೆಯನ್ನು ವಿನಾಶ ಮಾಡಿ ಸಮಾಜದ ಎಲ್ಲಾ ವರ್ಗಗಳ ಏಳಿಗೆಗೂ ಉಪಯೋಗವಾಗುವಂತೆ ವಿಶ್ವವಿದ್ಯಾನಿಲಯಗಳು ಕಾರ್ಯ ಸಾಧಿಸಬೇಕು’ ಎಂದು ಭಾರತದ ಅಧ್ಯಕ್ಷ ಡಾ. ರಾಜೇಂದ್ರಪ್ರಸಾದ ಅವರು ಇಂದು ತಿಳಿಸಿದರು.
ನವದೆಹಲಿ ವಿಶ್ವವಿದ್ಯಾನಿಲಯದ 28ನೇ ಘಟಿಕೋತ್ಸವ ಭಾಷಣ ಮಾಡುತ್ತಾ ಡಾ. ರಾಜೇಂದ್ರ ಪ್ರಸಾದರು, ಭಾರತದಲ್ಲಿ ವ್ಯಕ್ತಿರ್ಗತವಾದ ಆಸೆ, ಆಕಾಂಕ್ಷೆಗಳಿಗೂ, ಸಮಾಜಕ್ಕೂ
ಇರುವ ಭೇದಭಾವ ತೊಲಗಿಸಲು ನಾವು ಯತ್ನಿಸಬೇಕೆಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.