
ಜಮ್ಮು, ಫೆ. 10 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದ ರಾಚೌರಿ ಜಿಲ್ಲೆಯ ಕೊಚತ್ವಾಲ್ ಎಂಬ ಹಳ್ಳಿಯಲ್ಲಿ ನಿನ್ನೆ ರಾತ್ರಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರು ಮಹಿಳೆಯರು, ಏಳು ಮಕ್ಕಳು ಸೇರಿದಂತೆ ಹದಿನೈದು ಜನರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನಿನ್ನೆ ಮಧ್ಯರಾತ್ರಿ ಹಳ್ಳಿಗೆ ದಾಳಿ
ಯಿಟ್ಟ ಉಗ್ರರು ಮೊದಲು ಮಕ್ಕಳನ್ನು ಹೊಡೆದರು. ನಂತರ ಒಂದೇ ಸಮನೆ ಗುಂಡಿನ ಮಳೆಗರೆದರು. ಇದರಿಂದ ಬಾಕೆರ್ವಾಲ್ ಸಮುದಾಯದ 15 ಜನರು ಮೃತರಾದರು. ತಕ್ಷಣ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರು ಧಾವಿಸಿ ಪ್ರತಿದಾಳಿ ನಡೆಸಿದರು.
ಅಪಘಾತ: ಹೊತ್ತಿಕೊಂಡ ಬೆಂಕಿಗೆ 10 ಜನ ಸಜೀವ ದಹನ
ಬೆಳಗಾವಿ, ಫೆ. 10– ಸಂಕೇಶ್ವರ ಬಳಿಯ ಹೆಬ್ಬಾಳ ಸಮೀಪ ರಾಷ್ಟ್ರೀಯ ಹೆದ್ದಾರಿ (ಪುಣೆ–ಬೆಂಗಳೂರು) ನಂ. 4ರಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಟೆಂಪೋಟ್ರ್ಯಾಕ್ಸ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸೇರಿದಂತೆ 10 ಜನರು ಸಜೀವ ದಹನವಾಗಿದ್ದು, ಮೂವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಟೆಂಪೋಟ್ರ್ಯಾಕ್ಸ್, ಲಾರಿ ಹಾಗೂ 8 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕ, ಟೆಂಪೋಟ್ರ್ಯಾಕ್ಸ್ ಚಾಲಕ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.