75 ವರ್ಷಗಳ ಹಿಂದೆ
ಟೋಕಿಯೊ, ಸೆಪ್ಟೆಂಬರ್ 4– ಪಶ್ಚಿಮ ಜಪಾನ್‌ನಲ್ಲಿ ‘ಜೇನ್’ ಚಂಡಮಾರುತದ ಅಬ್ಬರಕ್ಕೆ 250 ಮಂದಿ ಮೃತಪಟ್ಟಿದ್ದು, 5 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.
ನ್ಯಾಷನಲ್ ರೂರಲ್ ಪೊಲೀಸ್ ವಿಭಾಗದಿಂದ ಈ ಮಾಹಿತಿ ಸಂಗ್ರಹಿಸಲಾಗಿದ್ದು, ಚಂಡಮಾರುತದಿಂದ ಮೃತಪಟ್ಟವರು ಮತ್ತು ನಿರಾಶ್ರಿತ ರಾದವರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಕಳೆದ 16 ವರ್ಷಗಳಲ್ಲಿ ಪಶ್ಚಿಮ ಜಪಾನ್‌ನಲ್ಲಿ ಚಂಡಮಾರುತವೊಂದು ಸೃಷ್ಟಿಸಿರುವ ಅತಿದೊಡ್ಡ ಅನಾಹುತ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.