ADVERTISEMENT

75 ವರ್ಷಗಳ ಹಿಂದೆ: ಕೇಂಬ್ರಿಡ್ಜ್ ವಿವಿ ಉಪಸ್ಥಾನಪತಿ ಪದವಿಗೆ ಪಂಡಿತ ನೆಹರೂ ಹೆಸರು?

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:39 IST
Last Updated 17 ಅಕ್ಟೋಬರ್ 2025, 23:39 IST
   

ಲಂಡನ್‌, ಅ. 17– ಕೇಂಬ್ರಿಡ್ಜ್‌ ವಿಶ್ವ ವಿದ್ಯಾನಿಲಯದ ಪತ್ರಿಕೆ ‘ವಾರ್ಸಿಟಿ’ಯು ಫೀಲ್ಡ್‌ ಮಾರ್ಷಲ್‌ ಸ್ಮಟ್ಸ್‌ರ ಮರಣಾ ನಂತರ ಪಂಡಿತ ನೆಹರೂ ಅವರನ್ನು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸ್ಥಾನಪತಿ ಪದವಿಗೆ ಆಯ್ಕೆ ಮಾಡಿದೆ.

ಈ ಪದವಿಗೆ ಅರ್ಲ್‌ ಮೌಂಟ್‌ ಬ್ಯಾಟನ್‌ರವರು ಬರುವ ನಿರೀಕ್ಷೆ ಇದೆಯೆಂದೂ ‘ವಾರ್ಸಿಟಿ’ ಪತ್ರಿಕೆಯು ತಿಳಿಸಿದ್ದು, ‘ನೆಹರೂ ಏಕಾಗಬಾರದು?’ ಎಂದು ಕೇಳಿದೆ.

ಕಾಮನ್‌ವೆಲ್ತ್‌ ಕೂಟದಲ್ಲಿ ನೆಹರೂರವರು ಸ್ಮಟ್ಸ್‌ರವರಷ್ಟೇ
ಗೌರವಾನ್ವಿತರಾಗಿರುವರೆಂದೂ ಪತ್ರಿಕೆಯು ಸೂಚಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.