
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ವಿಶ್ವ ಸಮಸ್ಯೆ ಪರಿಹಾರಕ್ಕೆ ಸಾಧನವಾಗಲಿ
ನವದೆಹಲಿ, ಡಿ. 31– ಜಗತ್ತನ್ನು ಇಂದು ಕವಿದಿರುವ ನಿರಾಶಾಂಧಕಾರವನ್ನು ಲಂಡನ್ನಿನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಪ್ರಧಾನಿಗಳ ಸಮ್ಮೇಳನ ಕಡಿಮೆ ಮಾಡೀತೆಂಬ ಭರವಸೆಯನ್ನು ಭಾರತದ ಪ್ರಧಾನಿ ಜವಾಹರರು ಇಂದು ವ್ಯಕ್ತಪಡಿಸಿದರು.
ಪ್ರಧಾನಿಗಳು ರಾಷ್ಟ್ರದ ಜನತೆಯನ್ನುದ್ದೇಶಿಸಿ ನೂತನ ಸಂವತ್ಸರಾರಂಭಕ್ಕೆ ಹಿಂದಿನ ಸಂಜೆ ರೇಡಿಯೋ ಮೂಲಕ ಭಾಷಣ ಮಾಡುತ್ತಾ, ‘ಸರಿಯಾದ ಮಾರ್ಗದಲ್ಲಿ ಅಲ್ಪದೂರ ಸಾಗಿದರೂ ಸಮ್ಮೇಳನ ಕೃತಾರ್ಥವೆನಿಸೀತು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.