
ರಾಜ್ಯದ ಆರ್ಥಿಕ ಸ್ಥಿತಿ ಗಂಭೀರ: ಕೃಷ್ಣ
ವಿಜಾಪುರ, ಡಿ. 19– ರಾಜ್ಯದ ಹಣಕಾಸು ಸ್ಥಿತಿ ಗಂಭೀರವಾಗಿದ್ದು, ರಾಜ್ಯ ಸರ್ಕಾರ ಇದನ್ನು ಹೇಗೋ ನಿಭಾಯಿಸುತ್ತಿದೆ ಎಂದು ಹಣಕಾಸು ಖಾತೆಯ ಹೊಣೆಗಾರಿಕೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಹೇಳಿದರು.
ಇಲ್ಲಿಗೆ ಸಮೀಪದ ಕೊರ್ತಿ ಗ್ರಾಮದ ಬಳಿ ಕೊರ್ತಿ–ಕೊಲ್ಹಾರ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯುಕೆಪಿ ಸಂತ್ರಸ್ತರಿಗೆ ನೀಡಿರುವ ಪರಿಹಾರ ಧನ ಹೆಚ್ಚಿಸಬೇಕೆಂಬ ಬೇಡಿಕೆ ಕುರಿತು ಮೇಲಿನಂತೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಯಾವುದೇ ಪರಿಸ್ಥಿತಿಯಲ್ಲಿ ರೈತರ ಹಿತ ಕಡೆಗಣಿಸುವುದಿಲ್ಲ. ಈಗಾಗಲೇ, ಸಂತ್ರಸ್ತರ ಸಮಸ್ಯೆ ಕುರಿತು ಈ ಭಾಗದ ಜನಪ್ರತಿನಿಧಿಗಳ ಜತೆ ಎರಡು ಬಾರಿ ಸಮಾಲೋಚನೆ ನಡೆಸಿದೆ ಎಂದರು.
ಹಿಮಾಚಲ ಪ್ರದೇಶ: ಲಾರಿ ಕಮರಿಗೆ ಬಿದ್ದು 42 ಸಾವು
ಚಂಬಾ (ಹಿಮಾಚಲ ಪ್ರದೇಶ), ಡಿ. 19 (ಪಿಟಿಐ)– ಇಲ್ಲಿಂದ 60 ಕಿ.ಮೀ. ದೂರದ ಚಾಕೋಲಿಯಲ್ಲಿ ಲಾರಿಯೊಂದು ಇಂದು ಬೆಳಿಗ್ಗೆ ಆಳವಾದ ಕಮರಿಗೆ ಬಿದ್ದಿದ್ದು 42 ಮಂದಿ ಮೃತಪಟ್ಟು, ಒಬ್ಬಾತ ಗಾಯಗೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸತ್ತವರಲ್ಲಿ ಬಹಳಷ್ಟು ಮಂದಿ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಭ್ಯರ್ಥಿಗಳ ಬೆಂಬಲಿಗರಾಗಿದ್ದರು ಎಂದು ಚಂಬಾ ಜಿಲ್ಲಾಧಿಕಾರಿ ಟಿ.ಡಿ. ನೇಗಿ ಅವರು, ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.