
ಬೆಂಗಳೂರು, ಜ. 20– ವಿಭಾಗೀಯಮಟ್ಟದ ಆಡಳಿತ ಯಂತ್ರ ಹಾಗೂ ನಾಡ ಕಚೇರಿಗಳನ್ನು ರದ್ದುಪಡಿಸುವ ಜೊತೆಯಲ್ಲಿ ತಹಶೀಲ್ದಾರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯದರ್ಜೆ ಸಹಾಯಕ, ಕಿರಿಯ ಸಹಾಯಕ ಮತ್ತು ಸಹಾಯಕ ಹುದ್ದೆಗಳಿಗೆ ಇನ್ನು ಮುಂದೆ ನೇಮಕ ಮಾಡಬಾರದು ಎಂದು ರಾಜ್ಯ ಸರ್ಕಾರ ನೇಮಿಸಿದ್ದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ.
ಸಚಿವ ಸಂಪುಟವನ್ನು ಅವಶ್ಯಕತೆಗೆ ತಕ್ಕಂತೆ ಚಿಕ್ಕ ಹಾಗೂ ಚೊಕ್ಕವಾಗಿ ರಚಿಸಬೇಕು ಎಂದಿರುವ ಆಯೋಗವು ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಆರೋಗ್ಯದಲ್ಲಿ, ತೋಟಗಾರಿಕೆಯನ್ನು ಕೃಷಿಯಲ್ಲಿ ಸೇರಿಸಬೇಕು. ವಿಧಾನಸಭೆ ಮತ್ತು ವಿಧಾನಪರಿಷತ್‌ಗೆ ಒಂದೇ ಸಚಿವಾಲಯ ರಚಿಸಬೇಕು ಎಂದು ತಿಳಿಸಿದೆ.
ಅಮೆರಿಕದ 43ನೇ ಅಧ್ಯಕ್ಷರಾಗಿ ಬುಷ್ ಅಧಿಕಾರ ಸ್ವೀಕಾರ
ವಾಷಿಂಗ್ಟನ್, ಜ. 20 (ಯುಎನ್‌ಐ)– ಜಾರ್ಜ್ ವಾಕರ್ ಬುಷ್ ಅವರು ಇಂದು ಅಮೆರಿಕದ 43ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೂಲಕ ರಿಪಬ್ಲಿಕನ್ ಪಕ್ಷದ ಆಳ್ವಿಕೆ ಜಾರಿಗೆ ಬಂದಿತು.
ನಲವತ್ನಾಲ್ಕು ವರ್ಷದ ಟೆಕ್ನಾಸ್‌ನ ಮಾಜಿ ಗೌರ್ನರ್ ಬುಷ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವ ಈ ಹಿಂದೆ ಅಧ್ಯಕ್ಷರಾಗಿದ್ದವರ ಪುತ್ರರಲ್ಲಿ ಎರಡನೆಯವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.