75 ವರ್ಷಗಳ ಹಿಂದೆ
ದೆಹಲಿ, ಜುಲೈ 24– ಕಾಶ್ಮೀರ ಸಮಸ್ಯೆಯ ಕಡುಬಿಕ್ಕಟ್ಟಿನ ಪರಿಹಾರ ಸಮಾಲೋಚನಾರ್ಥವಾಗಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆ
ದಾರರಾದ ಸರ್ ಓವೆನ್‌ಡಿಕ್ಸನ್ ಅವರೂ, ಭಾರತದ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ, ಪಾಕಿಸ್ತಾನದ ಪ್ರಧಾನಿ ಲಿಯಾಕತಾಲಿ ಅವರೂ ಐದು ದಿವಸಗಳಿಂದಲೂ ದೆಹಲಿಯಲ್ಲಿ ಸೇರಿ ಇಂದು ತಮ್ಮ ಮಾತುಕತೆಗಳನ್ನು ಮುಗಿಸಿದ್ದಾರೆ.
ಉಭಯ ಪ್ರಧಾನಿಗಳ ಮುಂದಿನ ಸಭೆಯು ಕರಾಚಿಯಲ್ಲಿ ನಡೆಯಲಿದೆ.
ಅಚಿಸನ್‌ರಿಗೆ ನೆಹರೂ ರಹಸ್ಯ ಪತ್ರ?
ನವದೆಹಲಿ, ಜುಲೈ 24– ವಿಶ್ವಸಂಸ್ಥೆ ಯಲ್ಲಿ ಕಮ್ಯುನಿಸ್ಟ್ ಚೀನಾಕ್ಕೆ ಪ್ರಾತಿನಿಧ್ಯ ದೊರಕಿಸುವ ಪ್ರಯತ್ನದಲ್ಲಿ, ಭಾರತದ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅಮೆರಿಕದ ಸ್ಟೇಟ್ ಕಾರ್ಯದರ್ಶಿ ಅಚಿಸನ್ ಅವರಿಗೆ ರಹಸ್ಯವಾಗಿ, ವೈಯಕ್ತಿಕ ಮನವಿ ಪತ್ರವೊಂದನ್ನು ಕಳುಹಿಸಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.