
ಪ್ರಜಾವಾಣಿ ವಿಶೇಷ
ಕಾಶ್ಮೀರ ಸಮಸ್ಯೆ ಎಂದಿಗೂ ಹಿಂದೂ–ಮುಸ್ಲಿಂ ಪ್ರಶ್ನೆಯಲ್ಲ
ಲೇಕ್‌ಸಕ್ಸಸ್, ಮಾ. 2– ವಿಶ್ವ ಭದ್ರತಾ ಸಮಿತಿಯ ಮುಂದೆ ಅಮೆರಿಕಾ ಮತ್ತು ಬ್ರಿಟನ್ ಮಂಡಿಸಿರುವ ಕಾಶ್ಮೀರ ಸಮಸ್ಯಾ ಪರಿಹಾರಾರ್ಥ ನಿರ್ಣಯವನ್ನು ತಿರಸ್ಕರಿಸುತ್ತ ಭಾರತದ ಪ್ರತಿನಿಧಿ ಸರ್ ಬೆನಗಲ್ ನರಸಿಂಗರಾಯರು ಮಾತನಾಡುತ್ತಾ, ಕಾಶ್ಮೀರ ಸಮಸ್ಯೆಯು ಹಿಂದೂ, ಮುಸ್ಲಿಂ ಪ್ರಶ್ನೆಯೆಂದಿಗೂ ಅಲ್ಲವೆಂದು ದೃಢಪಡಿಸಿ ನುಡಿದರು.
ಭಾರತದಲ್ಲಿರುವ ಅಲ್ಪಸಂಖ್ಯಾತರು ಯಾವ ಜನಾಂಗದವರೇ ಆಗಲಿ ಅವರ ಹಿತರಕ್ಷಣೆಯು ಈಗ ಜಾರಿಯಲ್ಲಿರುವ ಭಾರತ ರಾಜ್ಯಾಂಗದಲ್ಲಿ ನಮೂದಿಸ ಲ್ಪಟ್ಟಿದೆ. ಭಾರತ ಸರ್ಕಾರದ ರಚನೆಯು ಈ ವಿಚಾರದ ಬಗ್ಗೆ ಪರಿಶೀಲನಾರ್ಹ.