
75 ವರ್ಷಗಳ ಹಿಂದೆ ಈ ದಿನ
ಮಂಗಳವಾರ, 20.02.1951
ದಿವಂಗತ ಶ್ರೀ ಖುರ್ಷಿದ್ ಲಾಲ್‌ರ ಅಂತ್ಯಕ್ರಿಯೆ
ನವದೆಹಲಿ, ಫೆ. 18– ಭಾರತ ಸರ್ಕಾರದ ಸಂಪರ್ಕ ಖಾತೆಯ ಉಪ ಸಚಿವರಾದ ಶ್ರೀ ಖುರ್ಷಿದ್ ಲಾಲ್‌ರವರು ಇಂದು ಬೆಳಿಗ್ಗೆ 10 ಗಂಟೆ 20 ನಿಮಿಷಕ್ಕೆ ದೆಹಲಿಯ ವಿಲಿಂಗ್‌ಡನ್ ಆಸ್ಪತ್ರೆಯಲ್ಲಿ ಹೃದಯಸ್ಥಂಭನದಿಂದ ಮೃತರಾದರು.
ಎರಡು ಮೈಲಿ ಉದ್ದದ ಮೆರವಣಿಗೆಯು ಜಮುನಾ ಘಾಟ್ ಸೇರಿದ ನಂತರ ಸಂಜೆ ಐದೂ ಕಾಲು ಗಂಟೆಗೆ ಶವಸಂಸ್ಕಾರ ನಡೆಸಲಾಯಿತು. ಮಹಾಪ್ರಧಾನಿ ನೆಹರೂ ಮತ್ತು ಇತರ ಮಂತ್ರಿಗಳೂ, ಪಾರ್ಲಿಮೆಂಟ್ ಸಭಾಧ್ಯಕ್ಷರು ಹಾಗೂ ಸದಸ್ಯರು ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ಸಿನೊಡನೆ ಐಕ್ಯತೆ ಸಾಧ್ಯವಿಲ್ಲ
ಮದ್ರಾಸ್, ಫೆ. 18– ಸಮಾಜವಾದಿಗಳು ಪುನಃ ಕಾಂಗ್ರೆಸ್ಸನ್ನು ಸೇರುವ ಸಂಭವ ಕಿಂಚಿತ್ ಮಾತ್ರವೂ ಇಲ್ಲ ಎಂದು ಸಮಾಜವಾದಿ ನಾಯಕರಾದ ಜಯಪ್ರಕಾಶ ನಾರಾಯಣರು ಈ ರಾತ್ರಿ ತಿಳಿಸಿದರು. ಸರ್ದಾರ್ ಪಟೇಲರ ನಿಧನಾನಂತರವೇ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟು ಉಂಟಾಗಬೇಕೆಂದು ಕೂಗೆದ್ದಿರುವುದರ ಕಾರಣವೇನು ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.