75 ವರ್ಷಗಳ ಹಿಂದೆ
ನವದೆಹಲಿ, ಆಗಸ್ಟ್ 1– ಭಾರತ ಸರ್ಕಾರದ ಆಹಾರ ಸಚಿವ ಕೆ.ಎಂ. ಮುನ್ಷಿ ಅವರು ಆಗಸ್ಟ್ ಮೂರನೆಯ ವಾರದಲ್ಲಿ ದೆಹಲಿಯಲ್ಲಿ ಎಲ್ಲ ಸಂಸ್ಥಾನಗಳ ಆಹಾರ ಮಂತ್ರಿಗಳ ಹಾಗೂ ಮುಖ್ಯಮಂತ್ರಿಗಳ ಸಮಾವೇಶವೊಂದನ್ನು ಕರೆದಿದ್ದಾರೆ.
ಆಹಾರ ಪರಿಸ್ಥಿತಿಯನ್ನು ಮುಖ್ಯವಾಗಿ 1948ರ ಸೆಪ್ಟೆಂಬರ್‌ನಲ್ಲಿ ಹತೋಟಿಯನ್ನು ಮತ್ತೆ ಹಾಕಿದಾಗ ಆದ ಪ್ರತಿಕ್ರಿಯೆಗಳ ಬಗ್ಗೆ ಈ ಸಭೆಯಲ್ಲಿ ಪರಿಶೀಲಿಸಲಾಗುವುದು.
ದೆಹಲಿ, ಆಗಸ್ಟ್ 1– ‘ಪಾಕಿಸ್ತಾನಕ್ಕೆ ಸೇರಿದ ಪೂರ್ವ ಬಂಗಾಳದ ಅಲ್ಪ ಸಂಖ್ಯಾತರ ಮನಸ್ಸಿನಲ್ಲಿ ಭದ್ರತೆಯ ಭರವಸೆಯು ಇಲ್ಲದಂತಾಗಿದೆಯೆಂದು ಹೇಳುತ್ತಿರುವುದು ನಿಜ’ ಎಂಬುದಾಗಿ ಇಂದು ಭಾರತ ಪಾರ್ಲಿಮೆಂಟ್‌ನಲ್ಲಿ ಮಹಾ ಪ್ರಧಾನಿ ಪಂಡಿತ್ ನೆಹರೂ ಅವರು, ಎಚ್.ವಿ. ಕಾಮತ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.