ADVERTISEMENT

ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ: ಕೆಲವು ಮಿತಕ್ಷೇತ್ರಗಳಲ್ಲಿ ಮಾತ್ರ ಅನ್ವಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
   

ನವದೆಹಲಿ, ಫೆ. 23– ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡುವುದು ‘ಕೆಲವು ಮಿತಕ್ಷೇತ್ರಗಳಲ್ಲಿ’ ಮಾತ್ರ ಸಾಧ್ಯವಾಗಬಹುದೆಂದು ಅರ್ಥ ಸಚಿವ ಸಿ.ಡಿ. ದೇಶಮುಖರು ಇಂದು ಪಾರ್ಲಿಮೆಂಟಿನಲ್ಲಿ ತಿಳಿಸಿದರು.

ವ್ಯಾವಸಾಯಿಕ ಕಾರ್ಮಿಕರ ವಿವಿಧ ವೃತ್ತಿಗಳಿಗೆ ಕನಿಷ್ಠ ವೇತನ ಮಸೂದೆಯನ್ನು ಅನ್ವಯ ಮಾಡುವುದು, ಈಗಿನ ಪರಿಸ್ಥಿತಿಯಲ್ಲಿ ಗ್ರಾಮಾಂತರ ಕಾರ್ಯಗಳಿಗೆ ಧಕ್ಕೆ ತರುತ್ತದೆ ಎಂಬುದು ಸಿ.ಡಿ. ದೇಶಮುಖರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT