
 ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆಮೈಸೂರು, ಅ. 30– ಅಖಿಲ ಮೈಸೂರು ಪತ್ರಿಕೋದ್ಯೋಗಿ ಗಳ ಸಮ್ಮೇಳನದ ಏಳನೇ ಅಧಿವೇಶನದ ಪ್ರಾರಂಭೋತ್ಸವವನ್ನು ಮೈಸೂರಿನ ರಾಜ ಪ್ರಮುಖರಾದ ಜಯಚಾಮರಾಜ ಒಡೆಯರ್ ಬಹದ್ದೂರ್‌ರವರು ನವೆಂಬರ್ 4ನೇ ತಾರೀಖು ಶನಿವಾರ ಬೆಳಿಗ್ಗೆ 10.45 ಗಂಟೆಗೆ ಜಗನ್ಮೋಹನ ಬಂಗಲೆಯಲ್ಲಿ ನೆರವೇರಿಸುತ್ತಾರೆ.
ಕೆ. ಜೀವಣ್ಣರಾಯರು ಅಧ್ಯಕ್ಷತೆ ವಹಿಸುತ್ತಾರೆ. ಆಹ್ವಾನಿತರೆಲ್ಲಾ ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಅರ್ಧಗಂಟೆ ಮೊದಲು ಬರಬೇಕೆಂದು ಸ್ವಾಗತ ಸಮಿತಿಯವರು ತಿಳಿಸಿದ್ದಾರೆ.
ಭಾರತ ವಾಣಿಜ್ಯದ ಮೇಲೆ ಅಪಮೌಲ್ಯದ ಪರಿಣಾಮ
ದೆಹಲಿ, ಅ. 30– ಪುನರ್‌ರಚಿತ ರಫ್ತು ಸಲಹಾ ಸಮಿತಿಯ ಪ್ರಥಮ ಅಧಿವೇಶನವು ಇಂದು ಮುಕ್ತಾಯವಾಯಿತು.
ಸಭೆಯಲ್ಲಿ ಭಾರತ ರಫ್ತು ನೀತಿಯ ವಿಶಿಷ್ಟ ಅಂಶಗಳನ್ನು ಪರಿಶೀಲಿಸ ಲಾಯಿತು.