
ಪ್ರಜಾವಾಣಿ ವಿಶೇಷನವದೆಹಲಿ, ನ. 9– ಕಠ್ಮಂಡುವಿನ ಭಾರತ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿರುವ ನೇಪಾಳದ ರಾಜರು, ಭಾರತಕ್ಕೆ ಬರಲು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆಂದು ಅಧಿಕೃತವಾಗಿ ಹೇಳಲಾಗಿದೆ.
ಭಾರತ ಸರ್ಕಾರವು ಇವರು ಭಾರತಕ್ಕೆ ಬರಲು ಸರ್ವ ಅನುಕೂಲ
ಗಳನ್ನು ಕಲ್ಪಿಸುವುದೆಂದು ವಿದೇಶಾಂಗ ಶಾಖಾ ವಕ್ತಾರರು ಇಂದು ತಿಳಿಸಿದರು.
56,000 ಚದರ ಮೈಲಿಗಳ ವಿಸ್ತೀರ್ಣದ ಗುಡ್ಡಗಾಡುಗಳ ಕಾಡಾದ ನೇಪಾಳದಲ್ಲಿ ಕ್ರಾಂತಿ ಆರಂಭವಾಗಲಿದೆ ಎಂದು ನೇಪಾಳಿ ಮುಖ್ಯ ವೃತ್ತವೊಂದರಿಂದ ಕಲ್ಕತ್ತೆಗೆ ಸುದ್ದಿ ಬಂದಿದೆ. ಇಂದು ನೇಪಾಳಿ ಪ್ರಧಾನಿಗಳ ಹತೋಟಿಯಲ್ಲಿರುವ ನೇಪಾಳಿ ಸೈನ್ಯವು, ಇಷ್ಟರಲ್ಲೇ ತನ್ನ ಧೋರಣೆ ಬದಲಾಯಿಸುವ ಚಿಹ್ನೆ ಇದೆ ಎಂದು ವಕ್ತಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.