
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಭಾರತಕ್ಕೆ ಅರವತ್ತು ಲಕ್ಷ ಟನ್ ಆಹಾರ ಧಾನ್ಯ
ಲಂಡನ್, ಜ. 9– ಅಮೆರಿಕದಲ್ಲಿ ಭಾರತದ ರಾಯಭಾರಿ ವಿಜಯಲಕ್ಷ್ಮಿ ಪಂಡಿತರು ಇಂದು ಇಲ್ಲಿ ಮಾತನಾಡುತ್ತ, ವಿದೇಶದಿಂದ ಜರೂರಾಗಿ ಅಗತ್ಯವಾಗಿರುವ ಅರವತ್ತು ಲಕ್ಷ ಟನ್‌ಗಳಷ್ಟು ಧಾನ್ಯದಲ್ಲಿ ಸ್ವಲ್ಪ ಭಾಗವಾದರೂ ಭಾರತಕ್ಕೆ ಫೆಬ್ರುವರಿ ತಿಂಗಳ ಹೊತ್ತಿಗೆ ಬರುವಂತೆ ಮಾಡಬೇಕೆಂಬುದು ಭಾರತ ಸರ್ಕಾರದ ಇಚ್ಛೆಯೆಂದು ತಿಳಿಸಿದರು. ಸರಬರಾಜು ಮಾಡಬೇಕೆಂದು ಅಮೆರಿಕಕ್ಕೆ ಕೇಳಿದ್ದ ಇಪ್ಪತ್ತು ಲಕ್ಷ ಟನ್ ಆಹಾರಧಾನ್ಯ ಸೂಕ್ತ ಕಾಲದಲ್ಲಿ ಭಾರತಕ್ಕೆ ಬರುವುದೆಂಬುದು ತಮ್ಮ ಭಾವನೆ ಎಂದು ವಿಜಯಲಕ್ಷ್ಮಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.