ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ 5ನೇ ಡಿಸೆಂಬರ್‌, 1997

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 6:13 IST
Last Updated 5 ಡಿಸೆಂಬರ್ 2022, 6:13 IST
   

ಫೆಬ್ರುವರಿ, ಮಾರ್ಚ್‌ನಲ್ಲಿ ಚುನಾವಣೆ

ನವದೆಹಲಿ, ಡಿಸೆಂಬರ್‌ 4:ಹನ್ನೊಂದನೆಯ ಲೋಕಸಭೆಯನ್ನು ರಾಷ್ಟ್ರಪತಿ ಇಂದು ವಿಧ್ಯುಕ್ತವಾಗಿ ವಿಸರ್ಜಿಸಿ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆದರು. ಅವಧಿ ಮುಗಿಸಲು ಮೂರೂವರೆ ವರ್ಷ ಕಾಲಾವಕಾಶ ಇದ್ದ ಪ್ರಸಕ್ತ ಲೋಕಸಭೆ ಹಠಾತ್‌ ಅಂತ್ಯಗೊಂಡ ಕಾರಣ ದೇಶ ಮತ್ತೊಮ್ಮೆ ಮಧ್ಯಂತರ ಚುನಾವಣೆ ಎದುರಿಸಬೇಕಾಗಿದೆ. ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳು ನಡೆಸಿದ ಎಲ್ಲ ಬಗೆಯ ಕಸರತ್ತುಗಳು ವಿಫಲಗೊಂಡ ನಂತರ ರಾಷ್ಟ್ರಪತಿ ಅನಿವಾರ್ಯವಾಗಿ ಕೈಗೊಂಡ ಈ ನಿರ್ಧಾರದಂತೆ, ಮಾರ್ಚ್‌ 15ರ ಒಳಗೆ ನೂತನ ಲೋಕಸಭೆಯನ್ನು ಅಸ್ತಿತ್ವಕ್ಕೆ ತರಲು ಚುನಾವಣಾ ಆಯೋಗ ಕ್ರಮ ಆರಂಭಿಸಿದೆ.

ಲೋಕಸಭೆಗೆ ಬರುವ ಫೆಬ್ರುವರಿ ತಿಂಗಳ ಮೂರನೇ ವಾರ ಹಾಗೂ ಮಾರ್ಚ್‌ ತಿಂಗಳ ಮೊದಲ ವಾರದ ಮಧ್ಯೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತ ಜಿ.ವಿ.ಜಿ. ಕೃಷ್ಣಮೂರ್ತಿ ಅವರು ಇಂದು ಇಲ್ಲಿ ತಿಳಿಸಿದ್ದಾರೆ.

ADVERTISEMENT

ರಂಗ, ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ

ನವದೆಹಲಿ, ಡಿಸೆಂಬರ್‌ 4:ಹನ್ನೊಂದನೆಯ ಲೋಕಸಭೆಯ ವಿಸರ್ಜನೆಗೆ ಸಂಯುಕ್ತರಂಗ ಮತ್ತು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಭಾರತೀಯ ಜನತಾ ಪಕ್ಷ ದೂರಿದೆ.

ಸಂಯುಕ್ತರಂಗ ಸರ್ಕಾರದ ಆಡಳಿತದಿಂದ ಆರ್ಥಿಕತೆ ಕುಂಠಿತವಾಯಿತು. ಕಾನೂನುರಹಿತ ಪರಿಸ್ಥಿತಿ ಉಂಟಾಯಿತು ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.