ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ, 26–01–1998

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 2:15 IST
Last Updated 26 ಜನವರಿ 2023, 2:15 IST
   

ಹೆಚ್ಚಿದ ಭ್ರಷ್ಟಾಚಾರ, ಹಿಂಸೆ: ರಾಷ್ಟ್ರಪತಿ ತೀವ್ರ ಕಳವಳ

ನವದೆಹಲಿ, ಜ– 25 (ಪಿಟಿಐ, ಯುಎನ್ಐ)– ದೇಶದಲ್ಲಿ ಕೋಮುವಾದ, ಜಾತಿವಾದ, ಭ್ರಷ್ಟಾಚಾರ ಹಿಂಸೆ ಹಾಗೂ ರಾಜಕೀಯದಲ್ಲಿ ಅಪರಾಧೀಕರಣ ತಡೆಯಿಲ್ಲದೇ ಬೆಳೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರಪತಿ ಕೆ. ಆರ್‌. ನಾರಾಯಣನ್‌ ಅವರು ಈ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವಂತೆ ಜನತೆಗೆ ಕರೆ ನೀಡಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.

ADVERTISEMENT

ಪಾಲ್ಖೀವಾಲ, ಲಕ್ಷ್ಮೀ ಸೆಹಗಲ್‌ಗೆ ಪದ್ಮವಿಭೂಷಣ ಅನಂತಮೂರ್ತಿ, ಎಸ್‌. ಚಂದ್ರಶೇಖರ್‌ಗೆ ಪದ್ಮಭೂಷಣ

ನವದೆಹಲಿ, ಜ. 25 (ಪಿಟಿಐ, ಯುಎನ್‌ಐ)– ಖ್ಯಾತ ನ್ಯಾಯವಾದಿ ನಾನಿ ಪಾಲ್ಖೀವಾಲ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಲಕ್ಷ್ಮೀ ಸೆಹಗಲ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕರ್ನಾಟಕದ ಖ್ಯಾತ ಸಾಹಿತಿ ಯು.ಆರ್‌. ಅನಂತಮೂರ್ತಿ, ಪ್ರೊ. ಶಿವರಾಮಕೃಷ್ಣನ್‌ ಚಂದ್ರಶೇಖರ್‌ (ವಿಜ್ಞಾನ– ಎಂಜಿನಿಯರಿಂಗ್‌ ಕಂಪ್ಯೂಟರ್‌) ಅವರೂ ಸೇರಿದಂತೆ 18 ಮಂದಿ ಗಣ್ಯರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.