ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಭಾನುವಾರ, 11.2.1996

25 years ago ಭಾನುವಾರ 11-2-1996

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 15:20 IST
Last Updated 10 ಫೆಬ್ರುವರಿ 2021, 15:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸುದೀರ್ಘ ಗೈರುಹಾಜರಿ: ವೈದ್ಯರ ವಜಾಕ್ಕೆ ಶಿಫಾರಸು

ಬೆಂಗಳೂರು, ಫೆ. 10– ಅಲ್ಪಕಾಲದ ರಜೆ ಪಡೆದು ಅನೇಕ ವರ್ಷಗಳಿಂದ ಕೆಲಸಕ್ಕೆ ಗೈರುಹಾಜರಾಗಿರುವ 44 ವೈದ್ಯಾಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ನಿರ್ದೇಶನಾಲಯವು, ಈ ವೈದ್ಯರನ್ನು ಸೇವೆಯಿಂದ ವಜಾ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅಪಾರ ಹಣ ದುಡಿಯುವ ಆಸೆಯಿಂದ ಆರೋಗ್ಯ ಇಲಾಖೆಯ ವೈದ್ಯರು, ನರ್ಸ್‌ಗಳು, ಪ್ರಯೋಗಾಲಯಗಳ ತಂತ್ರಜ್ಞರು ವಿದೇಶಕ್ಕೆ ಹೋಗಿ ಕೆಲ ವರ್ಷ ನೆಲೆಸಿದ್ದು ಮತ್ತೆ ಸೇವೆಗೆ ಹಾಜರಾಗುತ್ತಿರುವ ಚಾಳಿಗೆ ಇಷ್ಟರಲ್ಲಿಯೇ ಅಂತಿಮ ತೆರೆ ಬೀಳಲಿದೆ.

ADVERTISEMENT

ನಕಲಿ ಅಂಕಪಟ್ಟಿ ಜಾಲ ಬಯಲು

ಬೆಂಗಳೂರು, ಫೆ. 10– ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ಇತರ ಪದವಿಗಳ ಖೋಟಾ ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಸೃಷ್ಟಿಸಿ ಹೊರ ರಾಜ್ಯದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ವಂಚಕರ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಕಾಶ್ಮೀರದ ಜುನೇದಿ ಹಾಗೂ ರಿಯಾಜ್ ಎಂಬುವರು ಬೆಂಗಳೂರು, ಮೈಸೂರು, ಕೇರಳದ ಮಹಾತ್ಮ ಗಾಂಧಿ, ಕಲ್ಲತ್ತಾ, ಗೋವಾ ಹಾಗೂ ಅಮೆರಿಕದ ನ್ಯೂಪೋರ್ಟ್ ವಿಶ್ವವಿದ್ಯಾಲಯಗಳ ವಿವಿಧ ಪದವಿಗೆ ಸಂಬಂಧಿಸಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.