ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಸೋಮವಾರ 3.1.1972

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 19:30 IST
Last Updated 2 ಜನವರಿ 2022, 19:30 IST
   

ರಾಮಾವತಾರ

ನವದೆಹಲಿ, ಜ. 2– ದೆಹಲಿ ಪೌರರು ಇಂದು ಇಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ಗೌರವಾರ್ಥ ಏರ್ಪಡಿಸಿದ್ದ ಸನ್ಮಾನ ಸಭೆಯು, ರಾಮಾಯಾಣದ ಕಾಲದಿಂದಲೂ ಭಾರತೀಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಭಗವಾನ್ ಶ್ರೀರಾಮಚಂದ್ರ ಮೂರ್ತಿಗೆ ಇಂದಿರಾ ಗಾಂಧಿ ಅವರನ್ನು ಹೋಲಿಸಿತು.

ಶ್ರೀರಾಮನು ಲಂಕಾ ಜನರನ್ನು ರಾಕ್ಷಸ ರಾವಣನ ದುರಾಡಳಿತದಿಂದ ಬಿಡುಗಡೆ ಮಾಡಿದ ನಂತರ ಪ್ರಭುತ್ವವನ್ನು ರಾವಣನ ಸಹೋದರ ವಿಭೀಷಣನಿಗೆ ಒಪ್ಪಿಸಿದೆ.

ADVERTISEMENT

ಅದೇ ರೀತಿಯಲ್ಲಿ ಇಂದಿರಾ ಗಾಂಧಿ ಅವರು ಬಾಂಗ್ಲಾ ದೇಶದ ಜನರನ್ನೆಲ್ಲಾ ಜನರಲ್ ಯಾಹ್ಯಾಖಾನರ ಅಕೃತ್ಯಗಳಿಂದ ಪಾರು ಮಾಡಿದ ನಂತರ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ವರ್ಗಾಯಿಸಿದರೆಂದು ಭಿನ್ನವತ್ತಳೆಯಲ್ಲಿ ಬಣ್ಣಿಸಲಾಯಿತು.

ರಾಜಧಾನಿಯಲ್ಲಿ 286 ಸಂಘ– ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ‘ಇಂದಿರಾ ಗಾಂಧಿ ಅಭಿನಂದನಾ ಸಮಿತಿ’ ಪರವಾಗಿ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಧಾರಾಯನ್ ಅವರು ಭಿನ್ನವತ್ತಳೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.