ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶುಕ್ರವಾರ, 26–01–1973

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 16:37 IST
Last Updated 25 ಜನವರಿ 2023, 16:37 IST
   

ಹಿಂಸೆ, ಬೆದರಿಕೆ ಸಮಸ್ಯೆಗೆ ಪರಿಹಾರವಲ್ಲ

ನವದೆಹಲಿ. ಜ. 25– ರಾಷ್ಟ್ರಪತಿ ವಿ.ವಿ. ಗಿರಿಯವರು ಆಂಧ್ರ ಪ್ರದೇಶದ ಪರಿಸ್ಥಿತಿ ಬೆಳವಣಿಗೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿ ‘ಈ ಸಮಸ್ಯೆಯ ಬಗ್ಗೆ ಮನಃಪೂರ್ವಕವಾಗಿ ಮತ್ತು ಪೂರ್ವಭಾವಿ ಷರತ್ತಿಲ್ಲದೆ ಮಾತುಕತೆ ಆರಂಭಿಸಲು ರಾಜ್ಯದಲ್ಲಿ ಸಧ್ಯವಾದಷ್ಟು ಶೀಘ್ರವಾಗಿ ಶಾಂತ ಪರಿಸ್ಥಿತಿ ಮಾಡಬೇಕು’ ಎಂದು ಸೂಚಿಸಿದರು.

ಡಾ. ರಾಜಾರಾಮಣ್ಣ ಅವರಿಗೆ ಪದ್ಮಭೂಷಣ

ADVERTISEMENT

ನವದೆಹಲಿ, ಜ.25– ಯುಜಿಸಿ ಮಾಜಿ ಅಧ್ಯಕ್ಷ ಡಾ. ಡಿ.ಎಸ್‌. ಕೊಠಾರಿ, ಸ್ವಾತಂತ್ರ್ಯ ಹೋರಾಟಗಾರರಾದ ಬಸಂತಿದೇವಿ ಮತ್ತು ನಲ್ಲೀಸನ್‌ ಗುಪ್ತಾ ಅವರೂ ಸೇರಿದಂತೆ ಆರು ಮಂದಿಗೆ ಗಣರಾಜ್ಯ ದಿನೋತ್ಸವದ ಸಂದರ್ಭದಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಗಿದೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಯು.ಎನ್‌. ಢೇಬರ್‌, ಮುಖ್ಯ ಚುನಾವಣಾ ಕಮಿಷನರ್‌ ಡಾ. ನಾಗೇಂದ್ರ ಸಿಂಗ್‌ ಮತ್ತು ಕೇಂದ್ರ ಸಂಪುಟ ಮಾಜಿ ಕಾರ್ಯದರ್ಶಿ ಟಿ. ಸ್ವಾಮಿನಾಥನ್‌ ಅವರು ಪದ್ಮವಿಭೂಷಣ ಪಡೆದ ಇತರ ಮೂವರು. ಪ್ರಖ್ಯಾತ ಪತ್ರಿಕೋದ್ಯಮಿ ಪೋತನ್‌ ಜೋಸೆಫ್‌ ಅವರಿಗೆ ಮರಣೋತ್ತರ ‘ಪದ್ಮಭೂಷಣ’ ಪ್ರಶಸ್ತಿ ನೀಡಲಾಗಿದೆ. ವಿಜ್ಞಾನಿ ಡಾ. ರಾಜಾರಾಮಣ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.