ADVERTISEMENT

75 ವರ್ಷಗಳ ಹಿಂದೆ: ಪವಾಡ ಪುರುಷ ಸ್ಟೇಷನ್ ಮಾಸ್ಟರ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 22:54 IST
Last Updated 10 ಡಿಸೆಂಬರ್ 2025, 22:54 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ತಿರುಚನಾಪಳ್ಳಿ, ಡಿ.10– ಕುಮಾರ ಮಂಗಳಂ ರೈಲ್ವೆ ಸ್ಟೇಷನ್ ಮಾಸ್ಟರ್ ಶ್ರೀ ಟಿ.ಕೃಷ್ಣಮೂರ್ತಿ ಪಿಳ್ಳೆ ಎಂಬುವರು ಕೊಡುತ್ತಿರುವ ‘ಸರ್ವರೋಗ ನಿವಾರಣೆ’ ವಿಭೂತಿ ಪ್ರಸಾದವನ್ನೂ, ದಾರವನ್ನು ಸ್ವೀಕರಿಸಲು ಸಾವಿರಾರು ಜನರು ಬರುತ್ತಿದ್ದಾರೆ.

ಭಾನುವಾರ, ಶುಕ್ರವಾರಗಳಂದು ಸ್ತ್ರೀಯರಿಗೆ ಮಾತ್ರ ಪ್ರಸಾದವನ್ನು ಕೊಡಲಾಗುವುದು. ಈ ಪವಾಡ ಪುರುಷನಿಂದ ಪ್ರಸಾದವನ್ನು ಪಡೆಯಲು ಎಲ್ಲ ಜಾತಿಯ ಸಾವಿರಾರು ಮಂದಿ ಈತನ ಮನೆಯ ಮುಂದೆ ಕ್ಯೂ ನಿಲ್ಲುತ್ತಾರೆ.

ADVERTISEMENT

ಕೆಲವು ತಿಂಗಳುಗಳಿಂದ ಅಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಿದಂತೆ ಗೂರಲು, ತೊನ್ನು ಮತ್ತು ಇತರ ವ್ಯಾಧಿಗಳು ಪ್ರಸಾದದಿಂದ ಗುಣ ವಾಗಿರುವ ಕತೆಗಳು ಹೆಚ್ಚಾಗುತ್ತಿವೆ.

ಕೊರಿಯಾ ತ್ಯಜಿಸಿ ಜಪಾನಿಗೆ ಓಟ

ಸಿಯೋಲ್, ಡಿ.10– ದಿಗ್ಬ್ರಾಂತರಾದ ಸಾವಿರಾರು ಕೊರಿಯಾ ನಿರಾಶ್ರಿತರು ರಾತ್ರಿಯಲ್ಲಿ ಸಣ್ಣಪುಟ್ಟ ದೋಣಿಗಳಲ್ಲಿ ಜಪಾನಿಗೆ ತಪ್ಪಿಸಿಕೊಂಡು ಹೋಗಲು ತಲೆಗೆ 200 ಡಾಲರುಗಳಷ್ಟು ತೆರುತ್ತಿದ್ದಾರೆ.

ಈ ಕಳ್ಳತನದ ಸಾಗಾಟಕ್ಕೆ ಕ್ಷಣಕ್ಷಣಕ್ಕೂ ಬೆಲೆ ಏರುತ್ತಿದೆ. ಅಮೆರಿಕಾ ಅಥವಾ ಜಪಾನಿನ ಹಣವನ್ನೇ ಕೊಡ ಬೇಕೆಂಬುದು ಒಯ್ಯುವವರ ಹಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.