ADVERTISEMENT

25 ವರ್ಷಗಳ ಹಿಂದೆ | ಭಾರತದಲ್ಲಿ ದಲೈಲಾಮಾ: ಚೀನಾದ ಕಳವಳ

​ಪ್ರಜಾವಾಣಿ ವಾರ್ತೆ
Published 29 ಮೇ 2025, 23:30 IST
Last Updated 29 ಮೇ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಾರತದಲ್ಲಿ ದಲೈಲಾಮಾ: ಚೀನಾದ ಕಳವಳ

ಬೀಜಿಂಗ್‌, ಮೇ 29 (ಯುಎನ್‌ಐ)– ‘ದಲೈಲಾಮಾ ಮತ್ತು ಕರ್ಮಪಾ ಉಪಸ್ಥಿತಿ ಯಿಂದ ಭಾರತದಲ್ಲಿ ಚೀನಾ ವಿರೋಧಿ ಕೃತ್ಯಗಳು ತಲೆ ಎತ್ತುವ ಸಾಧ್ಯತೆಗಳಿವೆ’ ಎಂದು ಚೀನಾ ಇಂದು ಆತಂಕ ವ್ಯಕ್ತಪಡಿಸಿತು.

ಒಂದು ವಾರದ ಭೇಟಿಗಾಗಿ ಚೀನಾಕ್ಕೆ ಆಗಮಿಸಿರುವ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಈ ಕಳವಳ ವ್ಯಕ್ತಪಡಿಸಿದ ಚೀನಾ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ಅವರು, ಕರ್ಮಪಾ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ನವದೆಹಲಿಯನ್ನು ಶ್ಲಾಘಿಸಿದರು.

ತಮ್ಮ ದೇಶವು ದಲೈಲಾಮಾ ಅವರನ್ನು ಒಳಸಂಚಿನ ತಂಡವೊಂದರ ನಾಯಕ ಎಂದು ಪರಿಗಣಿಸಿದೆಯೇ ಹೊರತು ಶುದ್ಧ ಭಿಕ್ಷುವೆಂದು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಕ್ರಿಕೆಟ್‌: ಮೋಸದಾಟದ ತನಿಖೆ ಚುರುಕು

ನವದೆಹಲಿ, ಮೇ 29– ಕ್ರಿಕೆಟ್‌ ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಕೆಲವು ಆಟಗಾರರ ವೆಬ್‌ಸೈಟ್‌ಗಳಲ್ಲಿನ ದಾಖಲೆಗಳನ್ನೆಲ್ಲ ಸಿಬಿಐ ಪರೀಕ್ಷೆಗೆ ಒಳಪಡಿಸಿದೆ.

ಕ್ರಿಕೆಟ್‌ ವೀಕ್ಷಕ ವಿವರಣೆಗಾರ ನರೋತ್ತಮ್‌ ಪುರಿ, ಭಾರತ ತಂಡದ ಮಾಜಿ ಮ್ಯಾನೇಜರ್‌ ಅಜಿತ್‌ ವಾಡೇಕರ್‌, ಸುನಿಲ್‌ ಗಾವಸ್ಕರ್‌, ನವಜೋತ್‌ ಸಿಂಗ್‌ ಸಿಧು, ಕಿರಣ್‌ ಮೋರೆ, ಮಹಾರಾಷ್ಟ್ರದ ಉನ್ನತ ಪೊಲೀಸ್‌ ಅಧಿಕಾರಿ ರಾಕೇಶ್‌ ಮರಿಯ ಮುಂತಾದವರ ದಾಖಲೆಗಳನ್ನೆಲ್ಲ ಸಿಬಿಐ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.