ನವದೆಹಲಿ, ಆಗಸ್ಟ್ 13– ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರವೇ ಹೊಸ ಮಾದರಿಯ 500 ರೂಪಾಯಿಗಳ ನೋಟುಗಳನ್ನು ಬಿಡುಗಡೆ ಮಾಡಲಿದೆ. ಖೋಟಾ ನೋಟು ಚಲಾವಣೆಯನ್ನು ತಪ್ಪಿಸಿ, ಇನ್ನೂ ಹೆಚ್ಚುವರಿ ಭದ್ರತೆ ಒದಗಿಸುವ ಸಲುವಾಗಿ ಈ ನೋಟುಗಳನ್ನು ಹೊರತರಲು ನಿರ್ಧರಿಸಿದೆ.
ಆರಂಭದಲ್ಲಿ ಈ ನೋಟುಗಳನ್ನು 1987ರಲ್ಲಿ ಬಿಡುಗಡೆ ಮಾಡಲಾದ 500 ರೂಪಾಯಿ ನೋಟುಗಳಿಗೆ ಬದಲಾಯಿಸಿ ಸಾರ್ವಜನಿಕರಿಗೆ ನೀಡಲಾಗುವುದು ಎಂದು
ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.