ನವದೆಹಲಿ, ಆಗಸ್ಟ್ 14– ಅಪರಾಧಿಗಳು, ರಾಜಕಾರಣಿಗಳು ಮತ್ತು ಸಮಾಜದಲ್ಲಿ ಗಣ್ಯರೆನಿಸಿಕೊಂಡ ವ್ಯಕ್ತಿಗಳ ನಡುವೆ ಬೆಳೆಯುತ್ತಿರುವ ‘ಅಪವಿತ್ರ ಮೈತ್ರಿ’ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಷ್ಟ್ರಪತಿ ಕೆ.ಆರ್. ನಾರಾಯಣನ್, ಅಪರಾಧ ಜಗತ್ತಿನ ದೊರೆಗಳನ್ನು ಹತ್ತಿಕ್ಕಲು ಸರ್ಕಾರ ತನ್ನ ಅಧಿಕಾರ ದಂಡವನ್ನು ಸಮರ್ಥ ರೀತಿಯಲ್ಲಿ ಪ್ರಯೋಗಿಸಬೇಕು ಎಂದು ಕರೆ ನೀಡಿದರು.
ಅಪರಾಧ ಜಗತ್ತಿನ ವಿರುದ್ಧ ನಾಗರಿಕ ಸಮಾಜ ಮತ್ತು ಸರ್ಕಾರ ಒಗ್ಗೂಡಿ ಹೋರಾಟ ನಡೆಸಬೇಕು. ಸಮಾಜದಲ್ಲಿ ದುಷ್ಟಶಕ್ತಿಗಳು ಆಧಿಪತ್ಯ ನಡೆಸಲು ಅವಕಾಶ ನೀಡಬಾರದು ಎಂದರು.
ಮೈಸೂರು, ಆಗಸ್ಟ್ 14– ಟಾಡಾ ಕೈದಿಗಳ ಬಿಡುಗಡೆ ಮಾಡುವ ಸರ್ಕಾರದ ನಿಲುವನ್ನು ಪ್ರಶ್ನಿಸಿ ವೀರಪ್ಪನ್‌ನಿಂದ ಹತ್ಯೆಯಾದ ಸಬ್‌ಇನ್‌ಸ್ಪೆಕ್ಟರ್ ಎಂ. ಶಕೀಲ್ ಅಹಮ್ಮದ್ ಅವರ ತಂದೆ ಅಬ್ದುಲ್ ಕರೀಮ್ ಅವರು, ಟಾಡಾ ಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರಿಂದ ಇಂದು ನಡೆಯಬೇಕಾಗಿದ್ದ ಟಾಡಾ ಆರೋಪಗಳ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.