ADVERTISEMENT

75 ವರ್ಷಗಳ ಹಿಂದೆ: ಬೆಲ್ಲದ ಪರಮಾವಧಿ ಬೆಲೆ 19 ರೂಪಾಯಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 0:30 IST
Last Updated 2 ಡಿಸೆಂಬರ್ 2025, 0:30 IST
   

ಬೆಲ್ಲದ ಪರಮಾವಧಿ ಬೆಲೆ 19 ರೂಪಾಯಿ

ನವದೆಹಲಿ, ಡಿ. 1– ಹೆಚ್ಚು ಉತ್ಪನ್ನದ ಪ್ರಾಂತ್ಯಗಳ ಒಳ್ಳೆಯ ದರ್ಜೆ ಬೆಲ್ಲದ ಪರಮಾವಧಿ ಬೆಲೆಯನ್ನು (ರೈಲ್ವೆ) ಮಣಕ್ಕೆ 19 ರೂ. ಎಂದು ನಿಷ್ಕರ್ಶಿಸಲಾಗಿದೆ ಎಂಬುದಾಗಿ ಆಹಾರ ಶಾಖಾ ಸಚಿವ ಕೆ.ಎಂ. ಮುನ್ಷಿ ಅವರು, ಇಂದು ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು.

ಕಬ್ಬಿನ ಕನಿಷ್ಠ ಬೆಲೆಯನ್ನು ರೂ. 1.10 ಏರಿಸಲಾಗಿದೆ. ಸಕ್ಕರೆ ಮೇಲಿನ ಹತೋಟಿ ಮುಂದುವರಿಯುವುದು. ಆದರೆ, 1948–49ನೇ ಅಥವಾ 1949–50ನೇ ಸಾಲಿನ ತಯಾರಿಕೆಯ ಶೇ 107ಕ್ಕಿಂತಲೂ ಹೆಚ್ಚು ಉತ್ಪನ್ನ ಮಾಡಿದ ಕಾರ್ಖಾನೆಗಳಿಗೆ, ತಮ್ಮ ಹೆಚ್ಚಿನ ತಯಾರಿಕೆಯನ್ನು ನಿರ್ಬಂಧವಿಲ್ಲದೆ ಪೇಟೆಯಲ್ಲಿ ಮಾರಲು ಅವಕಾಶ ಕೊಡಲಾಗುವುದು.

ಸಕ್ಕರೆ ಕಾರ್ಖಾನೆ ಧಾರಣೆಯನ್ನು ರೂ. 28ರಿಂದ ರೂ. 29ಕ್ಕೆ ಏರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.