
ಪ್ರಜಾವಾಣಿ ವಾರ್ತೆನವದೆಹಲಿ, ಡಿ. 4– ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ (ರೇಷನ್) ರದ್ದು ಮಾಡುವ ಪ್ರಶ್ನೆಯನ್ನು ಭಾರತ ಸರ್ಕಾರ ಪುನರ್ ಪರಿಶೀಲಿಸುತ್ತಿದೆ ಎಂಬ ಅಂಶವನ್ನು ಇಂದು ಪಾರ್ಲಿಮೆಂಟಿನಲ್ಲಿ ಆಹಾರ ಸಚಿವರಾದ ಕೆ.ಎಂ. ಮುನ್ಷಿ ಅವರು ಹೊರಗೆಡಹಿದರು.
ಆಹಾರ ಪರಿಸ್ಥಿತಿ ಕುರಿತು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾಗ, ಮುಂಬೈನ ಆಹಾರ ಪರಿಸ್ಥಿತಿ ಬಗ್ಗೆ ಜೋಕಿಂ ಆಳ್ವಾರವರು ಹಾಕಿದ ಅಲ್ಪಾವಧಿ ಪ್ರಶ್ನೆಗೆ, ಮುನ್ಷಿ ಅವರು ಈ ಅಂಶವನ್ನು ಹೊರಗೆಡಹಿದರು.
ಗ್ರಾಮಾಂತರ ಪಡಿತರ ಪ್ರಶ್ನೆ ಪೂರಾ ಪರಿಶೀಲನೆಯಲ್ಲಿದೆ. ಪ್ರಸ್ತುತ ಭಾರತದ ಕೆಲವು ಭಾಗಗಳಲ್ಲಿ ಗ್ರಾಮಾಂತರ ಪಡಿತರ ಪದ್ಧತಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದಕ್ಕಾಗಿ ಹೊಸ ಮೂಲ ಯೋಜನೆಯನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.