ADVERTISEMENT

75 ವರ್ಷಗಳ ಹಿಂದೆ | ವಿಷದ ವೀಳ್ಯವಿತ್ತು ಧನಾಪಹಾರ!

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ವಿಷದ ವೀಳ್ಯವಿತ್ತು ಧನಾಪಹಾರ!

ಮಾಂಘೀರ್‌, ಆಗಸ್ಟ್‌ 13– ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತರುಣ ವಿದ್ಯಾರ್ಥಿಯೋರ್ವನ ಗಮನವನ್ನು ರಾಜಕೀಯದತ್ತ ಸೆಳೆದು ನಂತರ ಅವನಿಗೆ ವಿಷಪೂರಿತ ಎಲೆ ಅಡಿಕೆ ಇತ್ತು, ಆತನ 500 ರೂ.ಗಳಿದ್ದ ಪರ್ಸ್‌ ಮತ್ತು ರೇಡಿಯೊವನ್ನು ಅಪಹರಿಸಿದ ಸಂಗತಿ ವರದಿಯಾಗಿದೆ.

ಪೂರ್ಣಿಯಾದಿಂದ ಆ ತರುಣ ಗಯಾಕ್ಕೆ ಪ್ರಯಾಣ ಮಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಮೂವರು ಪ್ರಯಾಣಿಕರು ಆತನಿದ್ದ ಗಾಡಿ ಹತ್ತಿ ಭಾರತ ರಿಪಬ್ಲಿಕ್‌ ಕುರಿತು ಚರ್ಚೆ ಆರಂಭಿಸಿದರು. ಸ್ವಲ್ಪ ಹೊತ್ತಿನ ನಂತರ ತಮ್ಮಲ್ಲಿದ್ದ ವೀಳ್ಯವನ್ನು ತಿನ್ನಲು ಆತನಿಗೆ ಕೊಟ್ಟರು. ಪೊಲೀಸರು ಆತನನ್ನು ನೋಡಿದಾಗ ಆತ ವಿಷವುಂಡು ಪ್ರಜ್ಞೆ ಕಳೆದುಕೊಂಡಿದ್ದು, ಕಂಡು ಬಂತು.

ADVERTISEMENT

ಭೀಕರ ರೈಲ್ವೆ ಅಪಘಾತ

ಬನಾರಸ್‌, ಆಗಸ್ಟ್‌ 13– ಪೂರ್ವ ಬಂಗಾಳ ರೈಲ್ವೆಯ ಕೂಡಾನ್‌ ಎಕ್ಸ್‌ಪ್ರೆಸ್‌ ಈ ದಿನ ಮಧ್ಯಾಹ್ನ 12.25 ಗಂಟೆಗೆ ಭೀಕರ ಅಪಘಾತಕ್ಕೆ ಈಡಾಗಿದ್ದು, 23 ಮಂದಿ ಮೃತಪಟ್ಟು, 200 ಮಂದಿಗೆ ಗಾಯಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.