75 ವರ್ಷಗಳ ಹಿಂದೆ
ಬೆಂಗಳೂರು, ಆಗಸ್ಟ್ 14– ಕಬ್ಬಿನ ಸರಬರಾಜು ಇಲ್ಲವಾಗಿ ಮಂಡ್ಯ ದಲ್ಲಿರುವ ಸಕ್ಕರೆ ಕಾರ್ಖಾನೆ ಮತ್ತೆ ಕೆಲಸ ನಿಲ್ಲಿಸಿದೆ. ಕಳೆದ ತಿಂಗಳ ಮಧ್ಯ ಭಾಗದಲ್ಲಿ ಕಾರ್ಖಾನೆ ಕೆಲಸ ಪ್ರಾರಂಭಿಸಿದಾಗ 1948ರ ಕಬ್ಬಿನ ಬೆಳೆ ಸರಬರಾಜಾಗುತ್ತಿತ್ತು. ಕಾರ್ಖಾನೆಯು ಈ ಬೆಳೆಯನ್ನು, 1949ರ ಕೊಂಚ ಬೆಳೆಯನ್ನೂ ಮೂರು ವಾರಗಳಲ್ಲಿ ಅರೆದು ಮುಗಿಸಿತು.
ಗೌರಿಬಿದನೂರು ಮತ್ತು ಕುಣಿಗಲ್ ಮುಂತಾದ ಸಂಸ್ಥಾನದ ಇತರೆ ಪ್ರದೇಶಗಳಿಂದ ಕಬ್ಬನ್ನು ತರಿಸುವ ಯೋಚನೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.