
ಪ್ರಜಾವಾಣಿ ವಾರ್ತೆರೋಮ್, ಅ. 21– ಇಟಲಿಗೆ ವಿಹಾರಾರ್ಥ ಬಂದಿದ್ದ, ಇಟಲಿಯಲ್ಲಿ ಹುಟ್ಟಿದ, ಆದರೆ ಬ್ರಿಟನ್ನಿನ ಪ್ರಜೆತನವನ್ನು ಗಳಿಸಿ ಅಲ್ಲಿಯ ಪರಮಾಣು ಸಂಶೋಧನಾಲಯವೊಂದರಲ್ಲಿ ವಿಜ್ಞಾನಿಯಾಗಿದ್ದ ಪ್ರೊಫೆಸರ್ ಬ್ರೂನೋ ಪೊಂಟಿಕೊರೊ ಅವರು, ಇದ್ದಕ್ಕಿದ್ದ ಹಾಗೆ ಪತ್ತೆಯಿಲ್ಲದೆ ಹೋಗಿದ್ದಾರೆಂದೂ, ಪ್ರಾಯಶಃ ರಷ್ಯಕ್ಕೆ ಓಡಿಹೋಗಿರಬೇಕೆಂದು ವರದಿಯಾಗಿತ್ತಷ್ಟೆ.
ಇತ್ತೀಚಿನ ಪರಿಶೀಲನೆಗಳಿಂದ ಅವರು ಪೋಲೆಂಡಿನ ರಹದಾರಿಯ ಮೇಲೆ ಅಲ್ಲಿಗೆ ಹಾರಿ
ಹೋದರೆಂದೂ, ಬ್ರಿಟಿಷ್ ರಹದಾರಿಯ ಮೇಲೆ ಇಟಲಿಗೆ ಬಂದಿದ್ದುದರಿಂದ ಇಟಲಿಯ ಭದ್ರತಾ ಶಾಖೆಯ ಪೊಲೀಸರಿಗೆ ಅನುಮಾನವೇನೂ ಬರಲಿಲ್ಲವೆಂದೂ, ಆದರೆ, ಬ್ರಿಟಿಷ್ ಗುಪ್ತಶಾಖೆಯವರು ಪರಿಶೀಲನೆ ಆರಂಭಿಸಿದ ಮೇಲೆ ಈ ಅಂಶಗಳೆಲ್ಲವನ್ನು ಅವರು ತಿಳಿಸಿದ್ದಾರೆಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.