ADVERTISEMENT

75 ವರ್ಷಗಳ ಹಿಂದೆ: ಇಂದೂರಿನಲ್ಲಿ ಭಾರಿ ಬೆಂಕಿ ಅನಾಹುತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
   

ಇಂದೂರು, ಅ. 20– ಕಳೆದ ರಾತ್ರಿ ಇಂದೂರಿನ ಮೂರು ಸಾಗುವಾನಿ ಡಿಪೋಗಳಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಜ್ವಾಲೆ ಗಗನ ಮುಟ್ಟಿ, ಹೊಗೆ ನಗರವನ್ನೆಲ್ಲಾ ಆವರಿಸಿತ್ತು. ಇಂದೂರಿನ ಅಹಲ್ಯಾಪುರ ಪ್ರದೇಶದಲ್ಲಿ ಉಂಟಾದ ಈ ಬೆಂಕಿ ಅನಾಹುತದಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟವಾಗಿದೆ. 

ಪೊಲೀಸರು ಮತ್ತು ಬೆಂಕಿ ಆರಿಸುವ ಪಡೆಗಳವರ ಸಹಾಯದಿಂದ ಅನೇಕ ಗಂಟೆಗಳ ತರುವಾಯ ಬೆಂಕಿಯನ್ನು ಆರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT