ADVERTISEMENT

50 ವರ್ಷಗಳ ಹಿಂದೆ | ಗಗನಕ್ಕೇರುತ್ತಿರುವ ಬೆಲೆ: ಉಗ್ರ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 22:00 IST
Last Updated 10 ಆಗಸ್ಟ್ 2022, 22:00 IST
   

ಗಗನಕ್ಕೇರುತ್ತಿರುವ ಬೆಲೆ: ಉಗ್ರ ಖಂಡನೆ

ನವದೆಹಲಿ, ಆ.10– ಆಹಾರಧಾನ್ಯಗಳ ಬೆಲೆ ಹತೋಟಿ ಮಾಡಲು ವಿಫಲವಾಗಿರುವುದಕ್ಕಾಗಿ ಇಂದು ಲೋಕಸಭೆಯಲ್ಲಿ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಗತ್ಯ ವಸ್ತುಗಳ ಬೆಲೆಗಳು ಹಿಂದೆಂದೂ ಇಲ್ಲದಷ್ಟು ಏರಿಕೆಯಾಗಿರುವ ಬಗ್ಗೆ ಚರ್ಚೆಯನ್ನು ಆರಂಭಿಸಿದ ಶ್ರೀ ಪ್ರಸನ್ನ ಬಾಯಿ ಮೆಹ್ತಾ (ಸಂಸ್ಥಾ ಕಾಂಗ್ರೆಸ್‌) ಅವರು ‘ಗಗನಕ್ಕೇರುತ್ತಿರುವ ಬೆಲೆಗಳು ಶ್ರೀಸಾಮಾನ್ಯ ನಿಗೆ ತೀರಾ ಧಕ್ಕೆಯುಂಟು ಮಾಡಿವೆ’ ಎಂದರು. ಈಗಿನ ಪರಿಸ್ಥಿತಿಗೆ ಸರ್ಕಾರದ ತಪ್ಪು ಆರ್ಥಿಕ ನೀತಿಗಳೇ ಕಾರಣವೆಂದೂ ಅವರು ಹೇಳಿದರು.

ADVERTISEMENT

ಬೆಲೆ ಏರಿಕೆಗೆ ವಿಶ್ವ ಪ್ರವೃತ್ತಿ ಕಾರಣ ಎಂದು ಹೇಳುವುದರಲ್ಲಿ ಅರ್ಥವಿಲ್ಲವೆಂದ ಶ್ರೀ ಮೆಹ್ತಾ ಅವರು, ಕೈಗಾರಿಕಾ ಹಾಗೂ ಕೃಷಿ ಉತ್ಪಾದನೆ ಕಾಯ್ದುಕೊಂಡು ಬರುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

14 ನಗರ–159 ಪುರಸಭೆಗಳ ಲಕ್ಷಾಂತರ ಕಕ್ಕಸುಗಳ ಪರಿವರ್ತನೆಗೆ ಆದೇಶ

ಬೆಂಗಳೂರು, ಆ.10– ರಾಜ್ಯದ ಹದಿನಾಲ್ಕು ನಗರ ಸಭೆಗಳು ಮತ್ತು 159 ಪುರಸಭೆಗಳ ವ್ಯಾಪ್ತಿಯಲ್ಲಿರುವ ತೋಟಿಗಳು ಕೈಯಿಂದ ನಿರ್ಮಲಗೊಳಿಸುವ ಲಕ್ಷಾಂತರ ಕಕ್ಕಸು

ಗಳನ್ನು ತಕ್ಷಣದಿಂದ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ.

ಇನ್ನು ಮುಂದೆ, ಕೈಹಾಕಿ ಶುದ್ಧಗೊಳಿಸುವ ಕಕ್ಕಸುಗಳ ನಿರ್ಮಾಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಪೌರಾಡಳಿತ ಮಂತ್ರಿ ಶ್ರೀ ಬಸವಲಿಂಗಪ್ಪನವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.