ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 18–8–1972

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2022, 20:51 IST
Last Updated 17 ಆಗಸ್ಟ್ 2022, 20:51 IST
   

ಗಡಿ ವಿವಾದ: ವಿಧಾನಮಂಡಲದ ನಿರ್ಣಯಕ್ಕೆ ಸರ್ಕಾರ ಬದ್ಧ
ಬೆಂಗಳೂರು, ಆಗಸ್ಟ್‌ 17–
ಮೈಸೂರು– ಮಹಾರಾಷ್ಟ್ರ ಮತ್ತು ಮೈಸೂರು – ಕೇರಳ ಗಡಿ ವಿವಾದದ ಬಗ್ಗೆ ರಾಜ್ಯದ ವಿಧಾನ ಮಂಡಲ ಈಗಾಗಲೇ ತೆಗೆದುಕೊಂಡಿರುವ ನಿರ್ಣಯಕ್ಕೆ ಪ್ರಸಕ್ತ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಕೆ.ಎಚ್‌. ಪಾಟೀಲರು ಇಂದು ವಿಧಾನಸಭೆಯಲ್ಲಿ ಹೇಳಿದರು.

ಡಿ.ಬಿ. ಕಲಮಣಕರ್‌ (ಕಾಂ) ಪ್ರಶ್ನೆಗೆ ಉತ್ತರ ನೀಡಿದ ಅವರು, ಮಹಾಜನ ವರದಿ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ತಿಳಿವಳಿಕೆಯೇನೂ ಬಂದಿಲ್ಲವೆಂದರು. ಅಲ್ಲದೆ ಯಥಾಸ್ಥಿತಿ ಉಳಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸಲಹೆಯನ್ನೇನೂ ಮಾಡಿಲ್ಲವೆಂದರು.

ಮಜುಂದಾರ್‌ ಸಾವು: ನ್ಯಾಯಾಂಗ ತನಿಖೆಗೆ ಕೇಂದ್ರದ ನಕಾರ
ನವದೆಹಲಿ, ಆಗಸ್ಟ್‌ 17
– ನಕ್ಸಲೀಯ ಚಳವಳಿಯ ಸಂಸ್ಥಾಪಕ ಚಾರು ಮಜುಂದಾರ್‌ ಅವರು ಇತ್ತೀಚೆಗೆ ಪೊಲೀಸರ ಕಸ್ಟಡಿಯಲ್ಲಿ ಸಾವಿಗೀಡಾದುದಕ್ಕೆ ಕಾರಣವಾದ ಪರಿಸ್ಥಿತಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಸರ್ಕಾರ ಇಂದು ಲೋಕ ಸಭೆಯಲ್ಲಿ ತಿರಸ್ಕರಿಸಿತು.

ADVERTISEMENT

ಗೃಹ ವ್ಯವಹಾರಗಳ ರಾಜ್ಯ ಸಚಿವ ಕೆ.ಸಿ. ಪಂತ್‌, ಮ್ಯಾಜಿಸ್ಟ್ರೇಟ್‌ ಮಟ್ಟದ ತನಿಖೆ ಯೊಂದು ನಡೆಯುತ್ತಿದೆ ಎಂದು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.