ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ 12–7–1971

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 19:31 IST
Last Updated 11 ಜುಲೈ 2021, 19:31 IST
   

ಸಾರ್ವತ್ರಿಕ ಆರೋಗ್ಯ ವಿಮೆ ಜಾರಿಗೆ ತರಲು ರಾಷ್ಟ್ರಪತಿ ಗಿರಿ ಸಲಹೆ

ಬೆಂಗಳೂರು, ಜುಲೈ 11– ಈ ದೇಶದ ಕೋಟ್ಯಂತರ ಮಂದಿಗೆ ಹೊಂದುವಂತಹ ಸಂಯೋಜಿತ ವೈದ್ಯ ವ್ಯವಸ್ಥೆಯನ್ನು ರೂಪಿಸ ಬೇಕಾಗಿದೆ ಎಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿಯವರು ಇಂದು ಇಲ್ಲಿ ಸಲಹೆ ಮಾಡಿದರು.

‘ನಮ್ಮಲ್ಲಿರುವ ಅಲೋಪಥಿಕ್ ವೈದ್ಯರ ಸಂಖ್ಯೆ ಕಡಿಮೆ. ರೋಗಿಗಳ ಸಂಖ್ಯೆಗೆ ಅನುಗುಣವಾದ ಸಂಖ್ಯೆಯಲ್ಲಿ ವೈದ್ಯರನ್ನು ಹೊಂದಲು ಇನ್ನೂ ದೀರ್ಘಕಾಲ ಹಿಡಿಯುತ್ತದೆ’ ಎಂದರು.

ADVERTISEMENT

ನಗರದ ವಿಕ್ಟೋರಿಯಾ ಆಸ್ಪತ್ರೆಯ ವಜ್ರಮಹೋತ್ಸವವನ್ನು ಉದ್ಘಾಟಿಸಿದ ರಾಷ್ಟ್ರಪತಿಯವರು, ‘ನಾವು ಭಾರತೀಯ ವೈದ್ಯ ಮತ್ತು ಹೋಮಿಯೋಪಥಿ ಪದ್ಧತಿಯನ್ನು ಪೂರ್ಣ ಉಪಯೋಗಿಸಿಕೊಳ್ಳಬೇಕೆಂಬುದು ನನ್ನ ಭಾವನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.