ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಬುಧವಾರ, 7–10–1970

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
   

ರಾಜ್ಯ ಸಂಯುಕ್ತ ವಿದಾಯಕ ದಳದಿಂದ 11 ಮಂದಿ ಪಿಎಸ್‌ಪಿ ಸದಸ್ಯರ ನಿರ್ಗಮನ

ಬೆಂಗಳೂರು, ಅ. 6– ಕೆಲಕಾಲದಿಂದ ನಿರೀಕ್ಷಿಸಿದ್ದಂತೆ ರಾಜ್ಯ ವಿಧಾನಸಭೆಯ ಹನ್ನೊಂದು ಮಂದಿ ಪಿಎಸ್‌ಪಿ ಸದಸ್ಯರು ಸಂಯುಕ್ತ ವಿದಾಯಕ ದಳದಿಂದ ಹೊರಬರಲು ತೀರ್ಮಾನಿಸಿದ್ದಾರೆ.

ಲಖನೌ ವರದಿ: ಉತ್ತರ ಪ್ರದೇಶದಲ್ಲಿ ಐದು ಪಕ್ಷಗಳ ಕೂಟ ರಚಿಸುವ ಬಗ್ಗೆ ಆರಂಭವಾದ ವಿರೋಧ ಪಕ್ಷಗಳ ನಾಯಕರ, ಶಾಸಕರ ಮೂರು ದಿನಗಳ ಸಭೆಯು ಇಂದು ಯಾವ ನಿರ್ಧಾರವೂ ಇಲ್ಲದೆ ಮುಂದೂಡಲ್ಪಟ್ಟಿತು.

ADVERTISEMENT

ಕೇಂದ್ರ ನಾಯಕರೊಂದಿಗೆ ಸಮಾಲೋಚಿಸಿದ ನಂತರ, ಉದ್ದೇಶಿತ ಸಂಯುಕ್ತ ವಿಧಾಯಕ ದಳದ ನಾಯಕತ್ವದ ಬಗ್ಗೆ ಮುಂದೆ ಸೂಕ್ತವಾದ ಕಾಲದಲ್ಲಿ ನಿರ್ಧರಿಸಲಾಗುವುದು ಎಂದು ಈ ಐದು ಪಕ್ಷಗಳ ಸಮನ್ವಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದರು.

11 ನ್ಯಾಯಾಧೀಶರ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ರಚನೆ

ನವದೆಹಲಿ, ಅ. 6– ಮಾಜಿ ರಾಜರನ್ನು ಅಮಾನ್ಯಗೊಳಿಸಿ ರಾಷ್ಟ್ರಪತಿ ಹೊರಡಿಸಿರುವ ಆಜ್ಞೆಯ ಕ್ರಮಬದ್ಧತೆ
ಯನ್ನು ಪ್ರಶ್ನಿಸಿ ಎಂಟು ಜನ ಮಾಜಿ ಅರಸರು ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆಗಾಗಿ ಭಾರತದ ಶ್ರೇಷ್ಠ ನ್ಯಾಯಾಧೀಶರು ಸುಪ್ರೀಂ ಕೋರ್ಟಿನ ಹನ್ನೊಂದು ಜನ ನ್ಯಾಯಾಧೀಶರನ್ನೊಳಗೊಂಡ ಪೂರ್ಣ ಪೀಠವೊಂದನ್ನು ರಚಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.