ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 21–07–1972

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 14:44 IST
Last Updated 20 ಜುಲೈ 2022, 14:44 IST
   

ಮೈಸೂರು, ಜುಲೈ 20– ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಸ್ಥಳದ 46 ಮಂದಿ ಬಡ ಶ್ರೀವೈಷ್ಣವ ವಿದ್ಯಾರ್ಥಿಗಳಿಗೆ ಇಲ್ಲಿನ ಶ್ರೀ ಪರ ಕಾಲಮಠದಲ್ಲಿ ನಿತ್ಯಪಡಿ (ಅನ್ನದ ಉಂಡೆ) ಕೊಡಲಾಗುತ್ತಿದ್ದು, ಮಠದ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಕಲೆವು ನಿಯಮಗಳನ್ನು ವಿಧಿಸಿದ್ದು, ವಿದ್ಯಾರ್ಥಿಗಳು ಬಂಡಾಯವೆದ್ದಿದ್ದಾರೆ. ಇದರ ಫಲವಾಗಿ ಬುಧವಾರ ಬೆಳಿಗ್ಗೆಯಿಂದ ನಿತ್ಯಪಡಿಯನ್ನು ನಿಲ್ಲಿಸಲಾಗಿದೆ.

ನಿಯಮಗಳಲ್ಲಿ ಕಡ್ಡಾಯವಾಗಿಜುಟ್ಟುಬಿಡಬೇಕೆಂಬುದೂ ಒಂದು. 46 ಮಂದಿ ಪೈಕಿ ಮೂವರು ಮಾತ್ರಜುಟ್ಟುಬಿಟ್ಟಿದ್ದಾರೆ. ಈ ನಿಯಮಪಾಲನೆಗೆ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿತ್ತು.

ಬದಲಾದ ಕಾಲಕ್ಕೆಜುಟ್ಟುಬಿಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದ ವಿದ್ಯಾರ್ಥಿಗಳು ಸೋಮವಾರ ತಮ್ಮ ಮಾಮೂಲು ಕ್ರಾಪ್‌ ತಲೆಯಲ್ಲೇ ಪಡಿ ಪಡೆಯಲು ಮಠಕ್ಕೆ ಹಾಜರಾದರು. ಪಡಿ ಸಿಗಲಿಲ್ಲ.

ADVERTISEMENT

l ಕೇಂದ್ರ ಸಂಪುಟಕ್ಕೆ ಕೆಂಗಲ್‌ ಹನುಮಂತಯ್ಯ ರಾಜೀನಾಮೆ

ನವದೆಹಲಿ, ಜುಲೈ 20– ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಇಂದು ಸಂಜೆ ಇಲ್ಲಿ ಭೇಟಿ ಮಾಡಿದ ನಂತರ ರೈಲ್ವೆ ಸಚಿವ ಶ್ರೀ ಕೆ. ಹನುಮಂತಯ್ಯ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರೆಂದು ತಿಳಿದುಬಂದಿದೆ.

ಸಂಪುಟದ ಪುನರ್ರಚನೆಗೆ ನೆರವಾಗಲು ರಾಜೀನಾಮೆ ನೀಡಬೇಕೆಂದು ಪ್ರಧಾನ ಮಂತ್ರಿಗಳು ಕೇಳಿದ್ದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.