ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ – ಬುಧವಾರ 5.1.1972

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST
   

ಅಮೆರಿಕ ನೆರವು ನಿಲ್ಲಿಸಿದ ಹಿನ್ನೆಲೆಯಲ್ಲಿ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸಮೀಕ್ಷೆ

ನವದೆಹಲಿ, ಜ. 4– ಅಮೆರಿಕವು ಆರ್ಥಿಕ ನೆರವು ನಿಲ್ಲಿಸಿರುವುದರಿಂದ ರಾಷ್ಟ್ರದ ಹಣಕಾಸು ಪರಿಸ್ಥಿತಿ ಮೇಲೆ ಉಂಟಾಗಿರುವ ಪರಿಣಾಮವನ್ನು ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಇಂದು ಚರ್ಚಿಸಿತು.

ಈ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಸಂಚಿತ ನಿಧಿಗಳ ಪರಿಸ್ಥಿತಿಯನ್ನು ಸಮಿತಿ ಪರಿಶೀಲಿಸಿತು.

ADVERTISEMENT

ತುರ್ತು ಅಗತ್ಯವಿರುವ ಉಕ್ಕು ರಾಸಾಯನಿಕ ಗೊಬ್ಬರಗಳು, ಲೋಹಗಳು ಹಾಗೂ ಬಿಡಿಭಾಗಗಳ ಉತ್ಪಾದನೆಯನ್ನು ರಾಷ್ಟ್ರದಲ್ಲಿ ಹೆಚ್ಚಿಸುವುದರ ಜತೆಗೆ ಬೇರೆ ಮೂಲಗಳಿಂದ ಪಡೆಯುವ ಕ್ರಮಗಳನ್ನು ಸಮಿತಿ ಚರ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.