ADVERTISEMENT

75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 0:24 IST
Last Updated 26 ಜನವರಿ 2026, 0:24 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

‘ಒಳ–ಹೊರ ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ’

ನವದೆಹಲಿ, ಜ. 25– ರಾಷ್ಟ್ರಕ್ಕೆ ಒದಗಿರುವ ಆಂತರಿಕ ಹಾಗೂ ಬಾಹ್ಯ ವಿಪತ್ತುಗಳನ್ನು ಎದುರಿಸಲು ಟೊಂಕ ಕಟ್ಟಿ ನಿಲ್ಲಿ ಎಂಬುದಾಗಿ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಇಂದು ಭಾರತದ ಜನತೆಯನ್ನು ಕೋರಿದರು.

ಭಾರತಪ್ರಜಾ ರಾಜ್ಯೋದಯದ ವಾರ್ಷಿಕೋತ್ಸವದ ದಿನ ಮುನ್ನ ರಾಜೇಂದ್ರ ಪ್ರಸಾದರು ದೆಹಲಿ ರೇಡಿಯೊ ನಿಲಯದಿಂದ ಪ್ರಸಾರ ಭಾಷಣ ಮಾಡು‌ತ್ತ, ವರ್ಷದ ‘ಸಿದ್ಧಿ–ಸೋಲು’ಗಳ ಅಳತೆ ಮಾಡಿದರು. ರಾಷ್ಟ್ರೀಯ ಮನೋ ನಿರ್ಧಾರ, ಉತ್ಪನ್ನಶಕ್ತಿ ಮತ್ತು ಸ್ಥೈರ್ಯಗಳು ಮಾತ್ರವೇ ಆಹಾರದ ಬಿಕ್ಕಟ್ಟಿನಿಂದ ರಾಷ್ಟ್ರವನ್ನು ಪಾರುಗಾಣಿಸಬಲ್ಲಂಥವು ಎಂದು ಅನ್ನ ಸಮಸ್ಯೆಯ ಕುರಿತು ಅಭಿಪ್ರಾಯಪಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.