ಕೊಲಂಬೊ, ಸೆಪ್ಟೆಂಬರ್ 4 (ಪಿಟಿಐ)– ಶ್ರೀಲಂಕಾ ಸೈನಿಕರು ಹಾಗೂ ಎಲ್‌ಟಿಟಿಇ ಉಗ್ರರ ನಡುವೆ ಇಂದು ನಡೆದ ಭೀಕರ ಕದನದಲ್ಲಿ 114 ಮಂದಿ ಸೈನಿಕರು ಹಾಗೂ 230 ಮಂದಿ ಉಗ್ರರು ಸೇರಿದಂತೆ 344 ಮಂದಿ ಹತ್ಯೆಗೀಡಾಗಿದ್ದಾರೆ.
ಈ ಕದನದಲ್ಲಿ ಒಟ್ಟು 1,100 ಮಂದಿ ಗಾಯಗೊಂಡಿದ್ದಾರೆ. ಶ್ರೀಲಂಕಾದಲ್ಲಿ ಅಕ್ಟೋಬರ್ 10ರಂದು ನಡೆಯುವ ಸಂಸದೀಯ ಚುನಾವಣೆ ಹಿನ್ನೆಲೆಯಲ್ಲಿ ಎಲ್‌ಟಿಟಿಇ ಉಗ್ರರನ್ನು ಉತ್ತರ ಜಾಫ್ನಾದಿಂದ ಹೊರದಬ್ಬಲು ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ 230 ಉಗ್ರಗಾಮಿಗಳು ಮೃತಪಟ್ಟಿದ್ದಾರೆ.
ಇತರ ಹಿಂದುಳಿದ ಜಾತಿಗಳ ಪಟ್ಟಿಗೆ ಇನ್ನಷ್ಟು ಸೇರ್ಪಡೆ
ನವದೆಹಲಿ, ಸೆಪ್ಟೆಂಬರ್ 4 (ಪಿಟಿಐ)– ಕರ್ನಾಟಕವೂ ಸೇರಿದಂತೆ 13 ರಾಜ್ಯಗಳಿಗೆ ಅನ್ವಯವಾಗುವ ಕೇಂದ್ರ ಸರ್ಕಾರದ ಇತರ ಹಿಂದುಳಿದ ಜಾತಿಗಳ ಪಟ್ಟಿಗೆ ಇನ್ನಷ್ಟು ಜಾತಿಗಳನ್ನು ಸೇರಿಸಲು ಇಂದು ಕೇಂದ್ರ ಸಚಿವ ಸಂಪುಟ ನಿರ್ಧರಿಸಿತು.
ಹಿಂದುಳಿದ ಜಾತಿಗಳ ರಾಷ್ಟ್ರೀಯ ಆಯೋಗ ಸಲ್ಲಿಸಿರುವ 51 ಸಲಹೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದ ಸರ್ಕಾರದ ವಕ್ತಾರರು, ಹೊಸದಾಗಿ ಸೇರಿಸಿರುವ ಜಾತಿಗಳ ಹೆಸರುಗಳನ್ನು ನೀಡಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.