
75 ವರ್ಷಗಳ ಹಿಂದೆ ಈ ದಿನ
ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ
ನವದೆಹಲಿ, ಡಿ. 29– ಮಿಲಿಟರಿ ಸಾಲದ ಪತ್ರ ಅಥವಾ ಕೇಂದ್ರ ಸರ್ಕಾರ ಇಲ್ಲವೆ ಅವರಿಂದ ಅಧಿಕೃತರಾದವರು ನೀಡಿದ ವಿಶೇಷ ಅನುಮತಿ ಪತ್ರವಿಲ್ಲದೆ ಅಂತರ ಸಾಂಸ್ಥಾನಿಕವಾಗಿ ಸಕ್ಕರೆ ಸಾಗಾಟ ಕೂಡದೆಂದು ಭಾರತ ಸರ್ಕಾರವು ವಿಶೇಷ ಗೆಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ಸೇರಿಗೆ ಮೀರದಷ್ಟು ಸಕ್ಕರೆಯನ್ನು ನೈಜ ಪ್ರಯಾಣಿಕರ ಲಗೇಜಿನ ಭಾಗವಾಗಿ ತೆಗೆದುಕೊಂಡು
ಹೋಗು ವುದಕ್ಕೆ ಈ ಆಜ್ಞೆ
ಅನ್ವಯಿಸುವುದಿಲ್ಲ.
ಕನ್ನಡ ರಾಜಕವಿಗೆ ಮುಂಬೈ ಸತ್ಕಾರ
ಮುಂಬಯಿ, ಡಿ. 29– ಮದರಾಸಿನ ಕನ್ನಡ ರಾಜಕವಿ ಹಾಗೂ 34ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರೂ ಆದ ಎಂ. ಗೋವಿಂದ ಪೈ ಹಾಗೂ ಸುಪ್ರಸಿದ್ಧ ಕನ್ನಡ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಇಂದು ಸಂಜೆ ಮೈಸೂರು ಅಸೋಸಿಯೇಷನ್‌ನಲ್ಲಿ ಸತ್ಕಾರ ನೀಡಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಜೆ.ಎನ್. ಅಯ್ಯರ್‌ರವರು ಅತಿಥಿ ಗಳನ್ನು ಸ್ವಾಗತಿಸಿ ಮಾತನಾಡುತ್ತ, ಕನ್ನಡ ಸಾಹಿತ್ಯಕ್ಕೆ ಅತಿಥಿಗಳಿಬ್ಬರ ಕಾಣಿಕೆ ಅಗಾಧವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.