ಕಲ್ಬುರ್ಗಿ, ಸೆ. 6– ಮುಂದಿನ ವರ್ಷದಿಂದ ಉತ್ತಮ ಶಿಕ್ಷಕರಿಗಾಗಿ ಸರಕಾರ ನೀಡುವ ರಾಜ್ಯ ಪ್ರಶಸ್ತಿಯನ್ನು ‘ಜನ ಮೆಚ್ಚಿದ ಶಿಕ್ಷಕರಿಗೆ’ ನೀಡಲಾಗುವುದೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಅವರು ಇಂದು ಇಲ್ಲಿ ಪ್ರಕಟಿಸಿದರು. ಇಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶ್ರೇಷ್ಠ ಶಿಕ್ಷಕ ಪ್ರಶಸ್ತಿಗಾಗಿ ಶಿಕ್ಷಕರು ತಮ್ಮ ಆಯ್ಕೆಗಾಗಿ ತಾವೇ ಅರ್ಜಿಯನ್ನು ಹಿಡಿದುಕೊಂಡು ಹೋಗಬಾರದು. ಅರ್ಜಿ ಕೊಟ್ಟು ಸನ್ಮಾನಿಸಿಕೊಳ್ಳುವುದು ಸನ್ಮಾನವಾಗಲಾರದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.