
ಬೆಂಗಳೂರು, ಜ. 19– ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ಪರಿಣತರ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ತಂತ್ರಜ್ಞಾನ ಶಿಕ್ಷಣದ ರಾಷ್ಟ್ರೀಯ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಘೋಷಿಸಿದರು.
ಎಲೆಕ್ಟ್ರಾನಿಕ್ ಸಿಟಿಯ ಇನ್‌ಫೋಸಿಸ್ ಸಂಸ್ಥೆಗೆ ಭೇಟಿ ನೀಡಿದ್ದ ಅವರು, ವಿಶ್ವಮಟ್ಟದ ಸೌಲಭ್ಯ, ಮೂಲಭೂತ ಸೌಕರ್ಯ ಮತ್ತು ನಿರ್ವಹಣೆಯನ್ನು ನೀಡಿದರೆ ಭಾರತದ ಸಿಲಿಕಾನ್ ಕಣಿವೆಯ ಐಟಿ ಕಂಪನಿಗಳು ಮಾಡಿರುವ ಜಾದೂವನ್ನು ದೇಶದ ಇತರೆ ಸಂಸ್ಥೆಗಳು ಸಹ ಮಾಡುತ್ತವೆ ಎಂದರು.
ಕೋರ್ಟ್‌ನಲ್ಲಿ ಹಿಂದೂಜಾ ಸೋದರರ ಹಾಜರಿ
ನವದೆಹಲಿ, ಜ. 19 (ಯುಎನ್‌ಐ, ಪಿಟಿಐ)– ಬೊಫೋರ್ಸ್ ಫಿರಂಗಿ ಖರೀದಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ಶ್ರೀಮಂತ ಮತ್ತು ಪ್ರಭಾವಿ ಹಿಂದೂಜಾ ಸಹೋದರರಿಗೆ ವಿಶೇಷ ನ್ಯಾಯಾಲಯವು ಜಾಮೀನು ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.