ADVERTISEMENT

25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

ಪ್ರಜಾವಾಣಿ ವಿಶೇಷ
Published 18 ಜನವರಿ 2026, 0:55 IST
Last Updated 18 ಜನವರಿ 2026, 0:55 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಅಗ್ನಿ 2 ಯಶಸ್ವಿ ಪ್ರಯೋಗ

ಬಾಲಸೋರ್‌, ಜ.17 (ಪಿಟಿಐ)– ಸ್ವದೇಶದಲ್ಲೇ ನಿರ್ಮಿತಗೊಂಡ ಅಗ್ನಿ ಸರಣಿಯ ಉನ್ನತ ಕ್ಷಿಪಣಿ ಅಗ್ನಿ– 2 ಇಂದು ಪರೀಕ್ಷಾರ್ಥವಾಗಿ ಹಾರಿಬಿಡಲಾಯಿತು. ಪ್ರಯೋಗ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ.

ಸಮೀಪದ ವ್ಹೀಲರ್‌ ದ್ವೀಪದಿಂದ ಚಿಮ್ಮಿದೆ ಈ ಅಗ್ನಿ– (2). 2,000 ಕಿ.ಮೀಗಳಷ್ಟು ದೂರ ಕ್ರಮಿಸಿ ತನ್ನ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದೆ.

ಅಗ್ನಿ ಕ್ಷಿಪಣಿಯ ಸರಣಿ ಪರೀಕ್ಷೆಯಲ್ಲಿ ಇದು 5ನೇ ಪ್ರಯೋಗವಾಗಿದ್ದು, ಮೊದಲನೆಯ ಪರೀಕ್ಷೆ 1989ರಲ್ಲಿ ಇದೇ ಜಾಗದಲ್ಲಿ ನಡೆದಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.