ADVERTISEMENT

75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:30 IST
Last Updated 16 ಡಿಸೆಂಬರ್ 2025, 23:30 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ವಾಷಿಂಗ್ಟನ್‌, ಡಿ. 16– ಅಮೆರಿಕದ ಸಮಗ್ರ ಆರ್ಥಿಕ ಹಾಗೂ ಕೈಗಾರಿಕಾ ಸಾಮರ್ಥ್ಯವನ್ನು ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳುವ ಮಹದ್ಯೋಜನೆಗಳನ್ನು ಅಮೆರಿಕಾಧ್ಯಕ್ಷ ಟ್ರೂಮನ್‌ ನೆನ್ನೆ ರಾತ್ರಿ ರೇಡಿಯೊ ಮೂಲಕ ರಾಷ್ಟ್ರಕ್ಕೆಲ್ಲ ಘೋಷಿಸಿದರು.

ಈ ಕ್ರಮಗಳ ಅನ್ವಯಕ್ಕೆ ಅನುಕೂಲಪಡಿಸುವ ಸಲುವಾಗಿ ರಾಷ್ಟ್ರದಲ್ಲಿ ವಿಶೇಷ ಪರಿಸ್ಥಿತಿಯೆಂದು ಟ್ರೂಮನ್‌ ಘೋಷಿಸಿದರು. ವಿಶ್ವವನ್ನೇ ಕಮ್ಯೂನಿಸಂ ಕಬಳಿಸದಂತೆ ಹೋರಾಡಲು ರಾಷ್ಟ್ರವು ತನ್ನ ಶಕ್ತಿಯನ್ನು ಸಂಘಟಿಸಬೇಕೆಂದು ಅವರು ಅಮೆರಿಕಕ್ಕೆ ಕರೆಯಿತ್ತರು.

ADVERTISEMENT

ನಿಷ್ಠಾವಂತ ಸೇವಕ: ಸರದಾರರ ಬಗ್ಗೆ ಲಂಡನ್‌ ಪ್ರಶಂಸೆ

ಲಂಡನ್, ಡಿ. 16– ವಿಖ್ಯಾತ ಬ್ರಿಟಿಷ್ ವೃತ್ತ ಪತ್ರಿಕೆಗಳು ಇಂದು ದಿವಂಗತ ವಲ್ಲಭಭಾಯಿ ಪಟೇಲ್‌ ಬಗ್ಗೆ ಸಂಪಾದಕೀಯ ಮತ್ತು ಪ್ರಮುಖ ಲೇಖನಗಳನ್ನು ಪ್ರಕಟಿಸಿವೆ. ಸರ್ದಾರರ ಸಂಘಟನಾ ಚಾತುರ್ಯ, ದಿಟ್ಟತನಗಳನ್ನು ಹೊಗಳಿರುವ ಈ ಪತ್ರಿಕೆಗಳು, ಆತ ಭಾರತದ ಮಹಾತ್ರಯರಲ್ಲಿ ಒಬ್ಬರಾಗಿದ್ದರೆಂದು ಎತ್ತಿ ಸೂಚಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.