ADVERTISEMENT

25 ವರ್ಷಗಳ ಹಿಂದೆ: ವೀರಪ್ಪನ್‌ ಹಿಡಿತದಿಂದ ತಪ್ಪಿಸಿಕೊಂಡು ಬಂದ ನಾಗಪ್ಪ‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 22:30 IST
Last Updated 28 ಸೆಪ್ಟೆಂಬರ್ 2025, 22:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

25 ವರ್ಷಗಳ ಹಿಂದೆ; ಶುಕ್ರವಾರ, 29–9–2000

ಸೆ. 28– ಕಳೆದ 60 ದಿನಗಳಿಂದ ವರನಟ ಡಾ. ರಾಜ್‌ ಜತೆ ದಂತಚೋರ ವೀರಪ್ಪನ್‌ನ ಒತ್ತೆಯಾಳಾಗಿದ್ದ ನಾಗಪ್ಪ ಮರಡಗಿ ಅವರು, ಇಂದು ಬೆಳಗಿನ ಜಾವ ವೀರಪ್ಪನ್‌ ಸಹಚರರ ಕಪಿಮುಷ್ಟಿಯಿಂದ ತ‍ಪ್ಪಿಸಿಕೊಂಡು ಗಾಜನೂರಿಗೆ ಬಂದು ತಲುಪಿದ್ದಾರೆ.

ಬೆಳಗಿನ ಜಾವ ಎರಡು ಗಂಟೆ ವೇಳೆಯಲ್ಲಿ ತಮ್ಮ ಬೆಂಗಾವಲಿಗಿದ್ದ ವೀರಪ್ಪನ್‌ ಸಹಚರರ ಕಣ್ಣು ತಪ್ಪಿಸಿ ನಾಗಪ್ಪ ಅಲ್ಲಿಂದ ಪರಾರಿಯಾಗಿದ್ದು, ತಮಿಳುನಾಡಿನ ಕಲ್ಮಲಾ ಕಾಡಿನ ಮೂಲಕ ಗಾಜನೂರಿನ ತೋಟದ ಮನೆಗೆ ಬಂದು ಸೇರಿರುವುದಾಗಿ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಸಿ. ದಿನಕರ್‌ ಇಂದು ರಾತ್ರಿ, ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬಳ್ಳೊಳ್ಳಿ ಬಳಿ ಲಾರಿ–ಜೀಪ್‌ ಡಿಕ್ಕಿ: ಐವರ ಸಾವು

ವಿಜಾಪುರ, ಸೆ. 28– ಇಂದು ಮುಂಜಾನೆ ಬೆಳ್ಳೊಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿ ಮತ್ತು ಜೀಪ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಶಿರಡೋಣದ ಶ್ರೀಶೈಲ ಅಣ್ಣಪ್ಪ ಪೂಜಾರಿ (35), ಧರ್ಮಪ್ಪ ಮಲ್ಲಪ್ಪ ಮಲ್ಲಾಡಿ (45), ಹನುಮಂತ ನಿಂಗಪ್ಪ ಹಲಗೊಂಡಿ (40), ಸಿದ್ಧಪ್ಪ ಕೊಳಂಕರ್‌ (30) ಮತ್ತು ಬಾಗಣ್ಣ ಕಲ್ಲಪ್ಪ ಬೈರವಾಡಗಿ (23) ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.