
ನವದೆಹಲಿ, ಡಿ. 21 (ಪಿಟಿಐ, ಯುಎನ್‌ಐ)– ಮಹಿಳಾ ಮೀಸಲಾತಿ ಮಸೂದೆ ಇಂದು ಸಂಸತ್ತಿನ ಉಭಯ
ಸದನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿ ಲೋಕಸಭೆಯ ಕಲಾಪ
ವನ್ನು ನಾಳೆಗೆ ಮುಂದೂಡಲಾಯಿತು.
ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯವಾಗುವ ಮುನ್ನಾದಿನವಾದ ಇಂದು ಎರಡೂ ಸದನಗಳಲ್ಲಿಯೂ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ವಿರೋಧ ಪಕ್ಷದ ಸದಸ್ಯರು ಬಿಡಲಿಲ್ಲ. ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು, ಮೀಸಲಾತಿ ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಧಾರವಾಡ: ಲೈಂಗಿಕ ಕಿರುಕುಳ ತನಿಖೆಗೆ ಆದೇಶ
ಧಾರವಾಡ, ಡಿ. 21– ಇಡೀ ಶೈಕ್ಷಣಿಕ ವಲಯವನ್ನೇ ತಲ್ಲಣಗೊಳಿಸಿರುವ ಧಾರವಾಡದ ಮಹಾಗಣಪತಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರ ಮೇಲಿನ ‘ಲೈಂಗಿಕ ಕಿರುಕುಳ ಹಗರಣ’ ಕುರಿತು ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿಗಳ ಸಚಿವಾಲಯ ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸರಿಗೆ ಸೂಚಿಸಿದೆ. ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯ ಈ ಆದೇಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.