ADVERTISEMENT

ಅಂಚೆ ಇಲಾಖೆ ಜವಾಬ್ದಾರಿ ಮರೆಯಬಾರದು

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST

`ಬರಹ ಸಂಸ್ಕೃತಿ~ಯನ್ನು ಉಳಿಸಿ - ಬೆಳೆಸುವ ಸಲುವಾಗಿ ನಾನು ಕಳೆದ ಹನ್ನೆರಡು ವರ್ಷಗಳಿಂದ `ಪತ್ರ-ಸಂಸ್ಕೃತಿ~ ಎಂಬ ಸಂಘಟನೆಯನ್ನು  ಆರಂಭಿಸಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳನ್ನು ಬೆಸೆವ ಕಾರ್ಯದಲ್ಲಿ ನಿರತನಾಗಿದ್ದೇನೆ.

ಆದರೆ ಇತ್ತೀಚೆಗೆ ನಾವು ಅಂಚೆ ಡಬ್ಬಿಗೆ ಹಾಕಿದ ಪತ್ರಗಳು ಮತ್ತು ಪತ್ರಿಕೆಗಳು ವಿಳಾಸದಾರರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ.

ಇಷ್ಟೇ ಅಲ್ಲದೆ ಅಲ್ಲಲ್ಲಿ ತೂಗು ಹಾಕಲಾಗಿದ್ದ ಅಂಚೆ ಪೆಟ್ಟಿಗೆಗಳೂ ನಾಪತ್ತೆಯಾಗುತ್ತಿವೆ. ಇದರಿಂದ ಪತ್ರಗಳು ವಿಳಾಸದಾರರಿಗೆ ತಲುಪುವುದಾದರೂ ಹೇಗೆ? ಪತ್ರ ಸಂಸ್ಕೃತಿ ನಾಶದಿಂದ ಬರವಣಿಗೆಮೂಲೆಗುಂಪಾಗುತ್ತಿದೆ. ಬರಹದಿಂದ ನಮ್ಮ ಭಾಷೆ ಬೆಳೆಯುತ್ತದೆ. ವಿಚಾರ ವಿನಿಮಯದಿಂದ ಜ್ಞಾನವೃದ್ಧಿಯಾಗುತ್ತದೆ.

ಆದ್ದರಿಂದ  ಪತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಅಂಚೆ ಇಲಾಖೆ ನಿರ್ವಹಿಸಬೇಕು. ಕನಿಷ್ಠ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಾದರೂ    ಅಂಚೆ ಡಬ್ಬಿಗಳನ್ನು ಇಡಲು ಅಂಚೆ ಇಲಾಖೆಯವರು ಕ್ರಮಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.